ಎಲೆಕೋಸು ಮಂಚೂರಿ | Cabbage Manchurian recipe in Kannada and English

By

ಎಲೆಕೋಸು ಮಂಚೂರಿ

ಬೇಕಾಗುವ ಸಾಮಗ್ರಿಗಳು:
ಎಲೆಕೋಸು 1/4 ಕೆಜಿ
ಈರುಳ್ಳಿ 4
ಬೆಳ್ಳುಳ್ಳಿ 5-6 ಎಸಳು
ಹಸಿಮೆಣಸಿನಕಾಯಿ 10
ಕೊತ್ತಂಬರಿ ಸೊಪ್ಪು ಸ್ವಲ್ಪ
ಕಾರ್ನ್ ಫ್ಲೊರ್ 5 ಚಮಚ
ಮೈದಾಹಿಟ್ಟು 2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಟೊಮೆಟೊ ಸಾಸ್ 2ಚಮಚ
ರೆಡ್ ಚಿಲ್ಲಿ ಸಾಸ್ 1 ಚಮಚ
ಸೋಯಸಾಸ್ 1ಚಮಚ
ವಿನಿಗರ್ 1/2 ಚಮಚ
ಶುಂಠಿ 2ಇಂಚು

ಮಾಡುವ ವಿಧಾನ:
ಎಲೆಕೋಸು, ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು,ಶುಂಠಿ ಮತ್ತು ಹಸಿಮೆಣಸಿನಕಾಯಿಯನ್ನು ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ.
ಹೆಚ್ಚಿದ ಈರುಳ್ಳಿ , ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪುನ್ನು ಎರಡು ಭಾಗ ಮಾಡಿ ತೆಗೆದಿಡಿ.
ಒಂದು ಚಮಚ ಕಾರ್ನ್ ಫ್ಲೊರ್ ನ್ನು ಸ್ವಲ್ಪ ನೀರು ಹಾಕಿ ಕಲಸಿ ಕೊಳ್ಳಿ.

ಎಲೆಕೋಸು ಉಂಡೆ
ಒಂದು ಪಾತ್ರೆಗೆ ಹೆಚ್ಚಿದ ಎಲೆಕೋಸು,ಶುಂಠಿ ಬೆಳ್ಳುಳ್ಳಿ ಪೇಸ್ಟ್ಹೆ,ಹೆಚ್ಚಿದ ಒಂದು ಭಾಗ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಉಪ್ಪು, 4ಚಮಚ ಕಾರ್ನ್ ಫ್ಲೊರ್ ಮತ್ತು 2 ಚಮಚ ಮೈದಾ ಹಿಟ್ಟನ್ನು ಸೇರಿಸಿ ಚೆನ್ನಾಗಿ ಕಲಸಿ. ಸ್ವಲ್ಪ ಸ್ವಲ್ಪವೆ ನೀರು ಚುಮಿಕಿಸಿ ಗಟ್ಟಿಯಾಗಿ ಕಲಸಿ ಕೊಳ್ಳಿ. ಉಂಡೆ ಕಟ್ಟುವ ಹದ ಇರಲಿ. ಉಂಡೆ ಕಟ್ಟಲು ಸಾಧ್ಯವಿಲ್ಲ ಎಂದರೆ ಇನ್ನು ಸ್ವಲ್ಪ ಕಾರ್ನ್ ಫ್ಲೊರ್ ಮತ್ತು ಮೈದಾ ಹಿಟ್ಟು ಸೇರಿಸಿ ಕಲಸಿ ಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಎಲೆಕೋಸಿನ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆ ಮಾಡಿ ಎಣ್ಣೆ ಯಲ್ಲಿ ಹಾಕಿ ಫ್ರೈ ಮಾಡಿ ತೆಗೆದಿಡಿ. ಎರಡು ಬಾರಿ ಫ್ರೈ ಮಾಡಿ ತೆಗೆದಿಡಿ.

ಮಂಚೂರಿ ಫ್ರೈ
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹೆಚ್ಚಿದ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಿ ನಂತರ ರೆಡ್ ಚಿಲ್ಲಿ ಸಾಸ್, ಟೊಮೆಟೊ ಸಾಸ್ ಸೇರಿಸಿ ಮಿಕ್ಸ್ ಮಾಡಿ. ನೀರಿನಲ್ಲಿ ಕಲಿಸಿದ ಕಾರ್ನ್ ಫ್ಲೊರ್ ಹಾಕಿ.ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಎಣ್ಣೆಯಲ್ಲಿ ಕರಿದ ಎಲೆಕೋಸನ್ನು ಸೇರಿಸಿ ಸೊಯಾ ಸಾಸ್ ಮತ್ತು ವಿನಿಗರ್ ಸೇರಿಸಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಬಿಸಿಮಾಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿಯಾದ ರೋಡ್ ಸೈಡ್ ಕ್ಯಾಬೆಜ್ ಮಂಚೂರಿ ಸವಿಯಲು ಸಿದ್ಧ.

Cabbage Manchurian

Required ingredients :
Cabbage 1/4Kg
Onion 4
Garlic Cloves 5-6
Green Chillies 10
Coriander Leaves
Cornflour 5 Table Spoon
Maida 2 Table Spoon
Salt as required
Ginger Garlic Paste 1 Table Spoon
Tomato Sauce 2 Table Spoon
Red Chilly Sauce 1 ಚಮಚ
Soya Sauce 1 Table Spoon
Vinegar 1/2 Table Spoon
Ginger 2 Inch

Method:
Wash and chop the cabbage,onion,garlic cloves,coriander leaves,ginger and green chillies.
Separate chopped onion,,green chillies and coriander leaves into 2 parts.
Mix 1 Tablespoon of cornflour with little water and keep it aside.

Cabbage Balls
In a bowl, add ginger garlic paste, cabbage,1 part of chopped onion,green chillies and coriander leaves and mix it. Then add Salt, 4 Table spoon Cornflour and 2 Table Spoon Maida and mix it once again.Add water and combine them well and make small sized balls. Add more of cornflour and maida if you cannot make small sized balls.
In a pan,add oil and fry the cabbage balls and keep it aside . Fry once again so it becomes crispy.

Manchurian
In a pan add a teaspoon of cooking oil followed by chopped Onion,ginger,garlic and green chillies and fry then till onion becomes golden brown .Add red chilly sauce and tomato sauce .then Add cornflour mixed with water and salt and stir it for 2 minutes. Once it get aromatic add cabbage balls, soya sauce and vinegar and mix it keeping it in low flame.Finally add chopped coriander leaves for seasoning.

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz