ಮಸಾಲ ಪೂರಿ | Masala Poori recipe in Kannada and English

By

ಮಸಾಲ ಪೂರಿ

ಬೇಕಾಗುವ ಸಾಮಗ್ರಿಗಳು :
ಪೂರಿ 10-15
ಈರುಳ್ಳಿ 2
ಬೆಳ್ಳುಳ್ಳಿ 12 ಎಸಳು
ಶುಂಠಿ 1 ಇಂಚು
ಚಕ್ಕೆ 1″
ಲವಂಗ 3-4
ಮೆಣಸು ¼ ಚಮಚ
ಒಣ ಬಟಾಣಿ 150 ಗ್ರಾಂ
ಆಲೂಗಡ್ಡೆ 2
ಹಸಿಮೆಣಸಿನಕಾಯಿ 3-4
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 2-3 ಚಮಚ
ಅರಿಶಿನ ½ ಚಮಚ
ಕೊತ್ತಂಬರಿ ಸೊಪ್ಪು
ಗರಂ ಮಸಾಲ 1ಚಮಚ
ಚಾಟ್ ಮಸಾಲ 1ಚಮಚ
ಚಿಲ್ಲಿ ಪೌಡರ್ 2ಚಮಚ
ಖಾರ ಸೇವ್ ½ ಕಪ್

ಮಾಡುವ ವಿಧಾನ :
ಒಣ ಬಟಾಣಿ ಯನ್ನು 8-10 ಗಂಟೆಗಳ ಕಾಲ ನೀರಿನಲ್ಲಿ ನೆನಸಿ, ನಂತರ ಆಲೂಗಡ್ಡೆ ಸೇರಿಸಿ ಕುಕ್ಕರ್ ನಲ್ಲಿ ಮೆತ್ತಾಗಾಗುವರೆಗೂ ಬೇಯಿಸಿ ಕೊಳ್ಳಿ.
3ಚಮಚ ಬೇಯಿಸಿದ ಬಟಾಣಿ ಯನ್ನು ರುಬ್ಬಲು ತೆಗೆದಿಡಿ. ಉಳಿದ ಬಟಾಣಿ ಮತ್ತು ಆಲೂಗಡ್ಡೆಯನ್ನು ಮಸೆದು ಇಡಿ.
ಒಂದು ಈರುಳ್ಳಿ ಯನ್ನು ಉದ್ದುದ್ದ ಹೆಚ್ಚಿಕೊಳ್ಳಿ ಇನ್ನೊಂದು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಉದ್ದುದ್ದ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿಯನ್ನು ಹಾಕಿ ಉರಿದುಕೊಳ್ಳಿ. ನಂತರ ಇದಕ್ಕೆ ಶುಂಠಿ, ಟೊಮೆಟೊ, ಚಕ್ಕೆ, ಲವಂಗ, ಮೆಣಸು, ಬೇಯಿಸಿದ ಬಟಾಣಿ 3ಚಮಚ,ಕೊತ್ತಂಬರಿ ಸೊಪ್ಪು ಸ್ವಲ್ಪ ಸೇರಿಸಿ ರುಬ್ಬಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ರುಬ್ಬಿದ ಮಿಶ್ರಣ ಸೇರಿಸಿ ಇದಕ್ಕೆ ಗರಂ ಮಸಾಲ, ಚಾಟ್ ಮಸಾಲ, ಉಪ್ಪು, ಚಿಲ್ಲಿ ಪೌಡರ್ ಸೇರಿಸಿ ಬೇಯಲು ಬಿಡಿ. ಬೆಂದ ನಂತರ ಅದಕ್ಕೆ ಮಸೆದ ಬಟಾಣಿ ಆಲೂಗಡ್ಡೆ ಸೇರಿಸಿ. ಅಗತ್ಯ ಇದ್ದಷ್ಟು ನೀರು ಸೇರಿಸಿ ಕುದಿಸಿದರೆ ಬಟಾಣಿ ಮಸಾಲೆ ರೆಡಿ.

ಸರ್ವ್ ಮಾಡಲು :
ಒಂದು ತಟ್ಟೆಗೆ ಪೂರಿಗಳನ್ನು ಜೊಡಿಸಿ ಪುಡಿ ಮಾಡಿ ಇದರ ಮೇಲೆ 2-3 ಸೌಟು ಬಟಾಣಿ ಮಸಾಲ ಹಾಕಿ ಹೆಚ್ಚಿದ ಈರುಳ್ಳಿ ಖಾರಾ ಸೇವ್ ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿಯಾದ ಮಸಾಲ ಪೂರಿ ಸವಿಯಲು ಸಿದ್ಧ.

ಪೂರಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ

Masala Poori

Required Ingredients :
Poori 10-15
Onion 2
Garlic cloves 12
Ginger 1 inch
Cinnamon 1
Cloves 3-4
Peppercorns ¼ spoon
Fried peas 150 grams
Potato 2
Green Chillies 3-4
Salt as per taste
Cooking oil 2-3 spoons
Turmeric powder ½ spoon
Coriander leaves
Garam masala 1 spoon
Chat masala 1 spoon
Chilly Powder 2 spoon
Kara sev ½ cup

Method :
Soak the dried peas for 8-10 hours in water and then pressure cook it along with the potato until soft.
Keep aside 3 spoons of boiled peas for grinding. Smash the remaining peas and potato.
Slice 1 onion and chop the other into small pieces.
Chop the coriander leaves.
In a pan, add oil, once it is heated add sliced onion, garlic , green chillies and fry it. Then grind it along with ginger, tomato, cloves, cinnamon, peppercorns, 3 spoons of peas and Coriander leaves.
In a pan add oil, once it is heated add the grounded mixture, garam masala, chat masala, salt, chilly powder and allow the masala to cook. Once it is cooked add smashed peas, potato, required water and bring it to boil.Peas masala is ready

To Serve :
In a plate, arrange the Poori by crushing it. Add 2-3 scoops of peas masala, chopped onions, kara sev, chopped coriander leaves and it is ready to serve.

Click here for Poori recipe

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz