ಟೊಮೆಟೊ ಉಪ್ಪಿಟ್ಟು , ಕೇಸರಿ ಬಾತ್ ಮತ್ತು ಪುದೀನ ಉಪ್ಪಿಟ್ಟು | Tomato Upma , Kesari Bath and Pudina Upma recipe in Kannada and English

By

ಟೊಮೆಟೊ ಉಪ್ಪಿಟ್ಟು

ಬೇಕಾಗುವ ಸಾಮಗ್ರಿಗಳು:
ಬನ್ಸಿರವೆ 1 ಕಪ್
ಹಸಿಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು
ಕರಿಬೇವು 5
ಒಣಮೆಣಸಿನಕಾಯಿ ಪುಡಿ 1 ಚಮಚ
ಟೊಮೆಟೊ 3
ಈರುಳ್ಳಿ 1
ಎಣ್ಣೆ 2 – 3 ಚಮಚ
ಸಾಸಿವೆ 1/2 ಚಮಚ
ಕಡ್ಲೆಬೇಳೆ 1 ಚಮಚ
ಬಿಸಿ ನೀರು 2 – 1/2 ಕಪ್
ತುಪ್ಪ 2 ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಬನ್ಸಿರವೆ ಯನ್ನು ಸಣ್ಣ ಉರಿಯಲ್ಲಿ ಕೆಂಪಗೆ ಹುರಿದು ತೆಗೆದಿಡಿ.
ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಒಂದು ಟೊಮೆಟೊ ಸಣ್ಣಗೆ ಹೆಚ್ಚಿಡಿ.
2 ಟೊಮೆಟೊ ರುಬ್ಬಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಕಡ್ಲೆಬೇಳೆ ಕರಿಬೇವು ಈರುಳ್ಳಿ ಹಸಿಮೆಣಸಿನಕಾಯಿ ಟೊಮೆಟೊ ಹಾಕಿ ಫ್ರೈ ಮಾಡಿ ನಂತರ ರುಬ್ಬಿಕೊಂಡ ಟೊಮೆಟೊ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ. ಇದಕ್ಕೆ ಒಣಮೆಣಸಿನಕಾಯಿ ಪುಡಿ, ಉಪ್ಪು, ನೀರು ಸೇರಿಸಿ ಕುದಿಯಲು ಬಿಡಿ. ಕುದಿ ಬಂದಮೇಲೆ, ರವೆ ಯನ್ನು ಹಾಕಿ ಕೈಯಾಡಿಸಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಮತ್ತು ತುಪ್ಪ ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಟೊಮೆಟೊ ಉಪ್ಪಿಟ್ಟು ತಿನ್ನಲು ರೆಡಿ.

ಕೇಸರಿ ಬಾತ್

ಬೇಕಾಗುವ ಸಾಮಗ್ರಿಗಳು:
ಚಿರೋಟಿ ರವೆ 1ಕಪ್
ಸಕ್ಕರೆ 1ಕಪ್
ತುಪ್ಪ 1/2ಕಪ್
ಬಿಸಿ ನೀರು 2ಕಪ್
ದ್ರಾಕ್ಷಿ
ಗೋಡಂಬಿ
ಏಲಕ್ಕಿ ಪುಡಿ ಸ್ವಲ್ಪ

ಮಾಡುವ ವಿಧಾನ:
ಒಂದು ಬಾಣಲೆಗೆ 2 ಚಮಚ ತುಪ್ಪ ಹಾಕಿ ಬಿಸಿಯಾದ ಮೇಲೆ ದ್ರಾಕ್ಷಿ ಗೋಡಂಬಿಯನ್ನು ಹಾಕಿ ಹುರಿದು ತೆಗೆದಿಡಿ. ಅದೇ ಬಾಣಲೆಗೆ ರವೆ ಸೇರಿಸಿ 5 ನಿಮಿಷ ಹುರಿಯಿರಿ ನಂತರ ಸ್ವಲ್ಪ ಸ್ವಲ್ಪವೆ ಬಿಸಿನೀರನ್ನು ಸೇರಿಸಿ ಗಂಟಿಲ್ಲಂದಂತೆ ಕೈಯಾಡಿಸಿ ರವೆ ಬೇಯುವರೆಗೂ ಮುಚ್ಚಿಡಿ.
ಈಗ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸಕ್ಕರೆ ಕರಗಿದಾಗ ಉಳಿದ ತುಪ್ಪ ದ್ರಾಕ್ಷಿ ಗೋಡಂಬಿ ಮತ್ತು ಏಲಕ್ಕಿ ಪುಡಿ ಸೇರಿಸಿ ಕೈಯಾಡಿಸಿ ಕಡಿಮೆ ಉರಿಯಲ್ಲಿ 5 ನಿಮಿಷ ಮುಚ್ಚಿಡಿ. ಈಗ ರುಚಿಯಾದ ಕೇಸರಿ ಬಾತ್ ತಿನ್ನಲು ರೆಡಿ.

ಪುದೀನ ಉಪ್ಪಿಟ್ಟು

ಬೇಕಾಗುವ ಸಾಮಗ್ರಿಗಳು:
ಬನ್ಸಿರವೆ 1ಕಪ್
ಹಸಿಮೆಣಸಿನಕಾಯಿ 3-4
ಕೊತ್ತಂಬರಿ ಸೊಪ್ಪು 1/2 ಕಪ್
ಕರಿಬೇವು 5-6
ಪುದೀನ 1ಕಪ್
ಈರುಳ್ಳಿ 1
ಎಣ್ಣೆ 2 – 3 ಚಮಚ
ಸಾಸಿವೆ 1/2 ಚಮಚ
ಕಡ್ಲೆಬೇಳೆ 1ಚಮಚ
ಬಿಸಿ ನೀರು 2 – 1/2 ಕಪ್
ತುಪ್ಪ 2ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಶುಂಠಿ 1/2 ಇಂಚು
ನಿಂಬೆ ರಸ 1ಚಮಚ

ಮಾಡುವ ವಿಧಾನ:
ಬನ್ಸಿರವೆ ಯನ್ನು ಸಣ್ಣ ಉರಿಯಲ್ಲಿ ಕೆಂಪಗೆ ಹುರಿದು ತೆಗೆದಿಡಿ.
ಈರುಳ್ಳಿ ಹೆಚ್ಚಿಡಿ
ಪುದೀನ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಶುಂಠಿ ಇಷ್ಟನ್ನು ನುಣ್ಣಗೆ ರುಬ್ಬಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಕಡ್ಲೆಬೇಳೆ ಕರಿಬೇವು ಈರುಳ್ಳಿ ಹಾಕಿ ಫ್ರೈ ಮಾಡಿ ನಂತರ ರುಬ್ಬಿಕೊಂಡ ಪುದೀನ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ. ಇದಕ್ಕೆ ಉಪ್ಪು, ನೀರು ಸೇರಿಸಿ ಕುದಿಯಲು ಬಿಡಿ. ಕುದಿ ಬಂದಮೇಲೆ, ರವೆ ಯನ್ನು ಹಾಕಿ ಕೈಯಾಡಿಸಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು, ನಿಂಬೆ ರಸ ಮತ್ತು ತುಪ್ಪ ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಪುದೀನ ಉಪ್ಪಿಟ್ಟು ತಿನ್ನಲು ರೆಡಿ.

Tomato Upma

Required ingredients:
Bansi Rava 1 cup
Green Chiilies 2
Coriander leaves
Curry leaves 10
Red Chilly powder 1 spoon
Tomato 3
Onion 1
Cooking oil 2-3 spoon
Mustard seeds 1/2 spoon
Chana dal 1 spoon
Hot water 2 1/2 cup
Ghee 2 spoons
Salt as required

Method:
Roast the bansi Rava until it becomes red in colour on a low flame.
Chop the onions, green chillies, coriander leaves and tomatoes as thin as possible and keep it aside. Make a smooth paste of 2 tomatoes
In a pan, add oil, once it is heated add Mustard seeds, Chana dal, onions, green chillies, tomatoes and fry it. Then add tomato paste and fry it until raw fragrance goes. Add red chilly powder, salt and water and let it boil. Once it starts boiling add Rava and mix it well, keeping the flame in low let it cook Finally add Coriander leaves along with ghee and mix it well.

Kesari Bath

Required ingredients:
Chiroti Rava 1 cup
Sugar 1 cup
Ghee 1/2 cup
Hot water 2 cups
Rasins
Cashews
Elachi powder

Method:
In a pan add 2 spoons of Ghee and bring it heat. Once it is heated add Rasins along with cashews and roast it.
In the same pan, add Rava and roast it for 5 minutes. Then add hot water little by little and mix it well without any lumps and close the lid until the Rava cooks. Once it is cooked, add sugar and mix it well. When sugar melts add leftover Ghee, Rasins, cashews and Elachi powder and mix it well keeping the flame in low for 5 minutes with closed lid. And it is ready to be served.

Pudina Upma

Required ingredients:
Bansi Rava 1 cup
Green Chiilies 3-4
Coriander leaves 1/2 cup
Curry leaves 10
Mint leaves 1 cup
Onions 1
Cooking oil 2-3 spoons
Mustard seeds 1/2 spoon
Chana dal 1 spoon
Hot water 2 1/2 cup
Ghee 2 spoon
Salt as required
Ginger 1 inch
Lemon juice 1 spoon

Method:
Roast the Bansi Rava keeping the flame in low until it gets aromatic.
Chop the onions and make a fine paste of mint leaves, coriander leaves, green chillies and finger.
In a pan, add oil. Once heated add Mustard seeds, Chana dal, onions and fry it. Add the paste and fry it until raw fragrance goes. Then add salt and water and let it boil. Once it starts boiling add Rava and mix it well keeping the flame in low until it is cooked. Finally add chopped coriander leaves, lemon juice and ghee and give it a good mix and it is ready.

ಟೊಮೆಟೊ ಉಪ್ಪಿಟ್ಟು , ಕೇಸರಿ ಬಾತ್  ಮತ್ತು ಪುದೀನ ಉಪ್ಪಿಟ್ಟು |  Tomato Upma , Kesari Bath and Pudina Upma

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz