ಮೂಲಂಗಿ ಸೊಪ್ಪಿನ ಪಪ್ಪು
ಬೇಕಾಗುವ ಸಾಮಗ್ರಿಗಳು:
ಮೂಲಂಗಿ ಸೊಪ್ಪು 1ಕಟ್ಟು
ತೊಗರಿಬೇಳೆ 1ಕಪ್
ಟೊಮೆಟೊ 1
ಅರಿಶಿನ ಸ್ವಲ್ಪ
ಈರುಳ್ಳಿ 1
ಹುಣಸೆ ರಸ 2ಚಮಚ
ಒಣಮೆಣಸಿನ ಕಾಯಿ ಪುಡಿ 2ಚಮಚ
ಒಗ್ಗರಣೆಗೆ:
ಎಣ್ಣೆ 1ಚಮಚ
ಸಾಸಿವೆ 1/2ಚಮಚ
ಕರಿಬೇವು ಸ್ವಲ್ಪ
ಒಣಮೆಣಸಿನಕಾಯಿ 2
ಇಂಗು ಸ್ವಲ್ಪ
ಮಾಡುವ ವಿಧಾನ:
ಸೊಪ್ಪುನ್ನು ಸ್ವಚ್ಛ ಮಾಡಿ ತೊಳೆದು ಹೆಚ್ಚಿಡಿ.
ಈರುಳ್ಳಿ, ಟೊಮೆಟೊ ಹೆಚ್ಚಿಡಿ.
ತೊಗರಿಬೇಳೆ, ಅರಿಶಿನ, ಟೊಮೆಟೊ, ಈರುಳ್ಳಿ ಮತ್ತು ಮೂಲಂಗಿ ಸೊಪ್ಪುನ್ನು ಕುಕ್ಕರ್ ನಲ್ಲಿ ಮೆತ್ತಗೆ ಬೇಯಿಸಿ ಕೊಳ್ಳಿ. ತಣ್ಣಾಗಾದ ನಂತರ ಇದಕ್ಕೆ ಹುಣಸೆ ರಸ, ಒಣಮೆಣಸಿನಕಾಯಿ ಪುಡಿ ಮತ್ತು ಉಪ್ಪು ಸೇರಿಸಿ ಕುದಿಸಿ ಕೊನೆಯದಾಗಿ ಒಗ್ಗರಣೆ ಮಾಡಿದರೆ ರುಚಿಯಾದ ಮೂಲಂಗಿ ಸೊಪ್ಪಿನ ಪಪ್ಪು ರೆಡಿ.
ಪಪ್ಪು ಗಟ್ಟಿಯಾಗಿ ಇರಬೇಕು. ನೀರು ನೋಡಿ ಹಾಕಿ.
Nice skka
ಧನ್ಯವಾದಗಳು