ಖಿಚಡಿ | Simple Khichdi recipe in Kannada

By

ಖಿಚಡಿ

ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ 1/2 ಕಪ್
ಅಕ್ಕಿ 1/2 ಕಪ್
ಹಸಿಮೆಣಸಿನಕಾಯಿ 5
ಈರುಳ್ಳಿ 1
ಟೊಮೆಟೊ 1
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸ್ವಲ್ಪ
ಸಾಸಿವೆ 1/2 ಚಮಚ
ಜೀರಿಗೆ 1/2 ಚಮಚ
ಕಾಳು ಮೆಣಸಿನ ಪುಡಿ 1/2 ಚಮಚ
ಎಣ್ಣೆ 2ಚಮಚ
ಅರಿಶಿನ 1/2 ಚಮಚ
ಇಂಗು ಸ್ವಲ್ಪ
ಉಪ್ಪು
ತುಪ್ಪ 2ಚಮಚ
ನೀರು 3 ಕಪ್

ಮಾಡುವ ವಿಧಾನ:
ಕುಕ್ಕರ್ ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಕರಿಬೇವು, ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೊ, ಅರಿಶಿನ, ಇಂಗು ಸೇರಿಸಿ ಹುರಿಯಿರಿ. ನಂತರ ನೀರು ಸೇರಿಸಿ ಕುದಿಯಲು ಬಿಡಿ. ಈಗ ಅಕ್ಕಿ, ಹೆಸರುಬೇಳೆ, ಉಪ್ಪು, ಕಾಳುಮೆಣಸಿನ ಪುಡಿ ಸೇರಿಸಿ 3 ವಿಷಲ್ ಕೂಗಿಸಿ. ಕುಕ್ಕರ್ ತಣ್ಣಾಗಾದ ಮೇಲೆ ತೆಗೆದು ಕೊತ್ತಂಬರಿ ಸೊಪ್ಪು ಮತ್ತು ತುಪ್ಪ ಸೇರಿಸಿ ಬಡಿಸಿ.

ಇದು ಬಿಸಿ ಬೇಳೆ ಬಾತ್ ತರಹ ತೆಳ್ಳಗೆ ಇರಬೇಕು. ಗಟ್ಟಿಯಾದರೆ ಸ್ವಲ್ಪ ಬಿಸಿ ನೀರು ಸೇರಿಸಿ ಮಿಕ್ಸ್ ಮಾಡಿ.

 

_MG_1241

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz