ರಾಮನವಮಿ ವಿಶೇಷ |ಪಾನಕ, ನೀರು ಮಜ್ಜಿಗೆ, ಕೋಸಂಬರಿ | Panaka, Buttermilk and Kosambari recipes in Kannada

ರಾಮನವಮಿ ವಿಶೇಷ

ಪಾನಕ, ನೀರು ಮಜ್ಜಿಗೆ, ಕೋಸಂಬರಿ

ಪಾನಕ

ಬೇಕಾಗುವ ಸಾಮಗ್ರಿಗಳು:
ಕರಬೂಜ ಹಣ್ಣು 1
ಪುಡಿ ಬೆಲ್ಲ 1ಕಪ್
ಏಲಕ್ಕಿ ಪುಡಿ ಸ್ವಲ್ಪ
ನಿಂಬೆ ಹಣ್ಣು 1
ನೀರು

ಮಾಡುವ ವಿಧಾನ:
ಕರಬೂಜ ಹಣ್ಣನ್ನು ಸಿಪ್ಪೆ ಮತ್ತು ಬೀಜ ತೆಗೆದು ಕೈಯಲ್ಲಿ ಕಿವುಚಿ ಅಥವಾ ಮಿಕ್ಸಿಗೆ ಹಾಕಿ.
ಒಂದು ಪಾತ್ರೆಗೆ ನೀರು ಹಾಕಿ ಬೆಲ್ಲ ಸೇರಿಸಿ ಕರಗಿಸಿ ಶೋಧಿಸಿಕೊಳ್ಳಿ. ನಂತರ
ಒಂದು ಪಾತ್ರೆಯಲ್ಲಿ ಬೆಲ್ಲದ ನೀರು ಕರಬೂಜ ಹಣ್ಣಿನ ಮಿಶ್ರಣ ಏಲಕ್ಕಿ ಪುಡಿ ಮತ್ತು ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಆರೋಗ್ಯಕರ ಪಾನಕ ರೆಡಿ.

ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ.

ನೀರು ಮಜ್ಜಿಗೆ

ಬೇಕಾಗುವ ಸಾಮಗ್ರಿಗಳು:
ಮೊಸರು 1ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1/2 ಚಮಚ
ಹಸಿಮೆಣಸಿನಕಾಯಿ ಪೇಸ್ಟ್ 1/2 ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ನೀರು
ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ:
ಎಣ್ಣೆ 1/2 ಚಮಚ
ಸಾಸಿವೆ 1/4 ಚಮಚ
ಒಣಮೆಣಸಿನ ಕಾಯಿ 1
ಕರಿಬೇವು ಸ್ವಲ್ಪ
ಇಂಗು ಸ್ವಲ್ಪ

ಮಾಡುವ ವಿಧಾನ:
ಮೊಸರನ್ನು ಕಡೆದು ನೀರು ಸೇರಿಸಿ ಮಜ್ಜಿಗೆ ಮಾಡಿಕೊಳ್ಳಿ. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ ಪೇಸ್ಟ್ ಹೆಚ್ಚಿದ ಕೊತ್ತಂಬರಿ ಸೊಪ್ಪು ಉಪ್ಪು ಸೇರಿಸಿ ಮಿಕ್ಸ್ ಮಾಡಿ ಒಗ್ಗರಣೆ ಮಾಡಿದರೆ ರುಚಿಯಾದ ನೀರು ಮಜ್ಜಿಗೆ ರೆಡಿ.

ಕೋಸಂಬರಿ

ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ 1/2 ಕಪ್
ಕ್ಯಾರೆಟ್ ತುರಿ 2ಚಮಚ
ಸೌತೆಕಾಯಿ 1
ಹಸಿಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸ್ವಲ್ಪ
ಕಾಯಿತುರಿ 1ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಹೆಸರುಬೇಳೆ ಯನ್ನು ತೊಳೆದು 1ಗಂಟೆ ನೆನಸಿಡಿ.
ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಸೌತೆಕಾಯಿ ಮತ್ತು ಕರಿಬೇವುನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಒಂದು ಪಾತ್ರೆಯಲ್ಲಿ ನೆನಸಿದ ಹೆಸರುಬೇಳೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿಮೆಣಸಿನಕಾಯಿ, ಸೌತೆಕಾಯಿ, ಉಪ್ಪು, ಕ್ಯಾರೆಟ್ ತುರಿ, ತೆಂಗಿನ ತುರಿ ಎಲ್ಲಾ ಸೇರಿಸಿ ಮಿಕ್ಸ್ ಮಾಡಿದರೆ ಕೋಸಂಬರಿ ತಿನ್ನಲು ರೆಡಿ.

ರಾಮನವಮಿ ವಿಶೇಷ | ಪಾನಕ, ನೀರು ಮಜ್ಜಿಗೆ, ಕೋಸಂಬರಿ | Panaka, Buttermilk and Kosambari

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asiawww.bugunmersin.com - www.eskisehirescort.asia