ಬಾಳೆಕಾಯಿ ಬಜ್ಜಿ | Balekayi Bajji recipe in Kannada

By

ಬಾಳೆಕಾಯಿ ಬಜ್ಜಿ

ಬೇಕಾಗುವ ಸಾಮಗ್ರಿಗಳು:
ಬಾಳೆಕಾಯಿ 1
ಕಡ್ಲೆಹಿಟ್ಟು 1ಕಪ್
ಒಣ ಮೆಣಸಿನಕಾಯಿ ಪುಡಿ 2ಚಮಚ
ಜೀರಿಗೆ ಪುಡಿ 1/2 ಚಮಚ
ಅರಿಶಿನ 1/2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು

ಮಾಡುವ ವಿಧಾನ:
ಬಾಳೆಕಾಯಿಯನ್ನು ಸಿಪ್ಪೆ ತೆಗೆದು ವೃತ್ತಾಕಾರವಾಗಿ ತೆಳ್ಳಗೆ ಹೆಚ್ಚಿಕೊಳ್ಳಿ.
ಒಂದು ಪಾತ್ರೆಗೆ ಕಡ್ಲೆಹಿಟ್ಟು, ಉಪ್ಪು, ಅರಿಶಿನ, ಜೀರಿಗೆ ಪುಡಿ, ಒಣಮೆಣಸಿನಕಾಯಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಸ್ವಲ್ಪ ಸ್ವಲ್ಪವೆ ನೀರು ಸೇರಿಸಿ ದೊಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲಸಿ ಕೊಳ್ಳಿ. ನಂತರ ಬಾಳೆಕಾಯಿಯನ್ನು ಈ ಹಿಟ್ಟನಲ್ಲಿ ಎರಡು ಕಡೆ ಅದ್ದಿ ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕೆಂಪಗೆ ಕರಿಯಿರಿ. ಈಗ ರುಚಿಯಾದ ಗರಿ ಗರಿಯಾದ ಬಾಳೆಕಾಯಿ ಬಜ್ಜಿ ತಿನ್ನಲು ರೆಡಿ.

ಹಸಿರು ಚಟ್ನಿಯ ಬದಲು ರಂಜಕ ಜೊತೆಗೆ ಒಂದು ಸಲ ತಿಂದು ನೋಡಿ.

ಬಾಳೆಕಾಯಿ ಬಜ್ಜಿ | Balekayi Bajji

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz