ರಂಜಕ | Ranjaka recipe in Kannada

By

ಬೇಕಾಗುವ ಸಾಮಗ್ರಿಗಳು:
ಕೆಂಪು ಮೆಣಸಿನಕಾಯಿ
(ಹಣ್ಣು ಮೆಣಸಿನಕಾಯಿ) 1/4 ಕೆಜಿ
ಉಪ್ಪು ರುಚಿಗೆ ತಕ್ಕಷ್ಟು
ಬೆಳ್ಳುಳ್ಳಿ 25 ಎಸಳು
ನಿಂಬೆ ರಸ 1/4 ಕಪ್

ಮಾಡುವ ವಿಧಾನ:
ಮೆಣಸಿನಕಾಯಿಯನ್ನು ತೊಳೆದು ಒರೆಸಿಡಿ. ನಂತರ ಇದಕ್ಕೆ ಬೆಳ್ಳುಳ್ಳಿ ಉಪ್ಪು ಮತ್ತು ನಿಂಬೆ ರಸ ಸೇರಿಸಿ ರುಬ್ಬಿದರೆ ರುಚಿಯಾದ ರಂಜಕ ರೆಡಿ.

*ಇದನ್ನು ಹಸಿಮೆಣಸಿನಕಾಯಿ ಬಳಸಿ ಮಾಡಬಹುದು.
*ಇದು ರೊಟ್ಟಿ ಜೊತೆಗೆ ಅದ್ಭುತವಾಗಿರುತ್ತೆ.
*ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಮತ್ತು ರಂಜಕ ಸೇರಿಸಿ ಕಲಸಿ ತಿನ್ನಬಹುದು.
*ಸುಟ್ಟ ಬದನೆಗೆ ಇದನ್ನು ಸೇರಿಸಿ ಮಿಕ್ಸ್ ಮಾಡಿ ಉಪಯೋಗಿಸಬಹುದು.
*ಇದಕ್ಕೆ ಸ್ವಲ್ಪ ಮೆಂತ್ಯ ಮತ್ತು ಸಾಸಿವೆ ಹುರಿದು ಪುಡಿ ಮಾಡಿ ಸೇರಿಸಿ ಇಂಗಿನ ಒಗ್ಗರಣೆ ಮಾಡಿದರೆ ರುಚಿಯಾದ ಮೆಣಸಿನಕಾಯಿ ಉಪ್ಪಿನಕಾಯಿ ರೆಡಿ.
*ಇದನ್ನು ಪಲ್ಯಗಳಿಗೆ ಉಪಯೋಗಿಸಬಹುದು.
*ಇದನ್ನು ಉಪ್ಸಾರಿಗೆ ಖಾರವಾಗಿ ಬಳಸಬಹುದು.
*ಹಸಿರು ಚಟ್ನಿ ಬದಲಿಗೆ ಇದನ್ನು ಉಪಯೋಗಿಸಬಹುದು.

ಇದರಿಂದ ಎಷ್ಟು ಉಪಯೋಗ ಅಲ್ವಾ.

ರಂಜಕ | Ranjaka

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz