ಅವರೆಕಾಳು ಚಿತ್ರಾನ್ನ | Avarekalu Chitranna recipe in Kannada

By

ಅವರೆಕಾಳು ಚಿತ್ರಾನ್ನ

ಬೇಕಾಗುವ ಸಾಮಗ್ರಿಗಳು:
ಉದುರಾದ ಅನ್ನ 2 ಕಪ್
ಎಳೆ ಅವರೆಕಾಳು 1ಕಪ್
ಹಸಿಮೆಣಸಿನಕಾಯಿ 12
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ತೆಂಗಿನ ತುರಿ 2ಚಮಚ
ಎಣ್ಣೆ 3 ಚಮಚ
ಸಾಸಿವೆ 1/2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಅರಿಶಿನ ಸ್ವಲ್ಪ
ಈರುಳ್ಳಿ 1
ನಿಂಬೆ ರಸ 1ಚಮಚ

ಮಾಡುವ ವಿಧಾನ:
ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ.

ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ನಂತರ ಅವರೆಕಾಳು, ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು, ಅರಿಶಿನ ಉಪ್ಪು ಸೇರಿಸಿ ಕಾಳು ಮೆತ್ತಾಗಾಗುವರೆಗೂ ಬೇಯಿಸಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು, ಕಾಯಿ ತುರಿ ಮತ್ತು ನಿಂಬೆ ರಸ ಸೇರಿಸಿ ಕೈಯಾಡಿಸಿ.

ಉದುರಾದ ಅನ್ನಕ್ಕೆ ಹಾಕಿ ಕಲಿಸಿದರೆ ಅವರೆಕಾಳು ಚಿತ್ರಾನ್ನ ತಿನ್ನಲು ರೆಡಿ.

Leave a Comment

Your email address will not be published.

This site uses Akismet to reduce spam. Learn how your comment data is processed.

You may also like