ಸಬ್ಸಿಗೆ ಸೊಪ್ಪಿನ ಚಿತ್ರಾನ್ನ | Sabsige Soppina Chitranna recipe in Kannada

By

ಸಬ್ಸಿಗೆ ಸೊಪ್ಪಿನ ಚಿತ್ರಾನ್ನ

ಬೇಕಾಗುವ ಸಾಮಗ್ರಿಗಳು:
ಸಬ್ಸಿಗೆ ಸೊಪ್ಪು 2 ಸಣ್ಣ ಕಟ್ಟು
ಈರುಳ್ಳಿ 2
ಹಸಿಮೆಣಸಿನಕಾಯಿ 10
ಅರಿಶಿನ ಸ್ವಲ್ಪ
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಎಣ್ಣೆ 3-4 ಚಮಚ
ಸಾಸಿವೆ 1/4 ಚಮಚ
ಕಡ್ಲೆಬೇಳೆ 1ಚಮಚ
ಕಡ್ಲೆಕಾಯಿ 2ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಕಾಯಿತುರಿ 1/2 ಕಪ್
ನಿಂಬೆ ರಸ 1ಚಮಚ
ಉದುರಾದ ಅನ್ನ 2 ಕಪ್

ಮಾಡುವ ವಿಧಾನ:
ಸಬ್ಸಿಗೆ ಸೊಪ್ಪುನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಕಡ್ಲೆಬೇಳೆ ಕಡ್ಲೆಕಾಯಿ ಹಾಕಿ ಕೆಂಪಗೆ ಹುರಿಯಿರಿ ನಂತರ ಈರುಳ್ಳಿ ಹಸಿಮೆಣಸಿನಕಾಯಿ ಕರಿಬೇವು ಸಬ್ಸಿಗೆ ಸೊಪ್ಪು ಅರಿಶಿನ ಹಾಕಿ ಮೆತ್ತಾಗಾಗುವರೆಗೂ ಫ್ರೈ ಮಾಡಿ ಕೊನೆಯಲ್ಲಿ ಉಪ್ಪು ನಿಂಬೆ ರಸ ಕೊತ್ತಂಬರಿ ಸೊಪ್ಪು ಕಾಯಿ ತುರಿ ಸೇರಿಸಿ ಕೈಯಾಡಿಸಿ ಉದುರಾದ ಅನ್ನಕ್ಕೆ ಕಲಸಿದರೆ ರುಚಿಯಾದ ಸಬ್ಸಿಗೆ ಸೊಪ್ಪಿನ ಚಿತ್ರಾನ್ನ ರೆಡಿ.

ಸಬ್ಸಿಗೆ ಸೊಪ್ಪಿನ ಚಿತ್ರಾನ್ನ |Sabsige Soppina Chitranna

Leave a Comment

Your email address will not be published.

This site uses Akismet to reduce spam. Learn how your comment data is processed.

You may also like

www.bugunmersin.com - www.eskisehirescort.asia