ಬೆಂಡೆಕಾಯಿ ಮಜ್ಜಿಗೆ ಹುಳಿ | Bendekayi Majjige Huli recipe in Kannada and English

By

ಬೆಂಡೆಕಾಯಿ ಮಜ್ಜಿಗೆ ಹುಳಿ

ಬೇಕಾಗುವ ಸಾಮಗ್ರಿಗಳು :
ಗಟ್ಟಿ ಮೊಸರು 1 ಕಪ್
ಹಸಿಮೆಣಸಿನಕಾಯಿ 5-6
ಕೊತ್ತಂಬರಿ ಸೊಪ್ಪು ½ ಕಪ್
ಕರಿಬೇವು 5-6
ಜೀರಿಗೆ 1ಚಮಚ
ಎಣ್ಣೆ 1ಚಮಚ
ಸಾಸಿವೆ ¼ ಚಮಚ
ಕಡ್ಲೆಬೇಳೆ ನೆನೆಸಿದ್ದು 2 ಚಮಚ
ತೆಂಗಿನ ತುರಿ 2ಚಮಚ
ಬೆಂಡೆಕಾಯಿ ¼ ಕೆಜಿ
ಶುಂಠಿ 1 ಇಂಚು
ಅರಿಶಿನ ¼ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಒಣಮೆಣಸಿನ ಕಾಯಿ 2
ಇಂಗು ¼ ಚಮಚ

ಮಾಡುವ ವಿಧಾನ :
ತೆಂಗಿನ ತುರಿ, ಕಡ್ಲೆಬೇಳೆ, ಹಸಿಮೆಣಸಿನಕಾಯಿ, ಜೀರಿಗೆ, ಶುಂಠಿ, ಅರಿಶಿನ ಕೊತ್ತಂಬರಿ ಸೊಪ್ಪು ಸೇರಿಸಿ ರುಬ್ಬಿಕೊಳ್ಳಿ.
ಬೆಂಡೆಕಾಯಿಯನ್ನು ತೊಳೆದು ಒರೆಸಿ 1 ಇಂಚು ಉದ್ದ ಹೆಚ್ಚಿಕೊಳ್ಳಿ. ನಂತರ ಹುರಿದು ಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಕರಿಬೇವು ಒಣಮೆಣಸಿನ ಕಾಯಿ ಇಂಗು ಸೇರಿಸಿ ನಂತರ ರುಬ್ಬಿದ ಮಿಶ್ರಣ ಸೇರಿಸಿ ಹಸಿವಾಸನೆ ಹೋಗುವರೆಗೂ ಕುದಿಸಿ ನಂತರ ಕಡೆದ ಮೊಸರು ಉಪ್ಪು ಹಾಕಿ ಬೇಕಾದಷ್ಟು ನೀರು ಸೇರಿಸಿ ಕುದಿಸಿ ಕೊನೆಯದಾಗಿ ಬೆಂಡೆಕಾಯಿ ಯನ್ನು ಸೇರಿಸಿ 5 ನಿಮಿಷ ಕುದಿಸಿದರೆ ರುಚಿಯಾದ ಬೆಂಡೆಕಾಯಿ ಮಜ್ಜಿಗೆ ಹುಳಿ ಸವಿಯಲು ಸಿದ್ಧ.


Bendekayi Majige Huli

Required Ingredients :
Thick Curd 1 Cup
Green chilly 5-6
Coriander leaves ½ cup
Curry Leaves 5-6
Cumin 1 spoon
Cooking Oil 1 spoon
Mustard seeds ¼ spoon
Soaked Chana Dal 2 spoon
Grated coconut 2 spoons
Ladies’ finger ¼ kg
Ginger 1 inch
Turmeric Powder ¼ spoon
Salt as per taste
Dry Chilly 2
Asafetida ¼ spoon

Method :
Grind the grated coconut, chana dal, green chilly, cumin, ginger, turmeric powder and coriander leaves.
Wash and dry the ladies’ finger. Cut it into 1 inch long and roast it.
In a pan add oil once it is heated, add mustard seeds and allow it to pop. Add curry leaves, dry chilly, asafetida , grounded mixture and allow it to boil until raw smell goes. Add beaten curd, salt, required water and bring it to boil. At last add ladies finger and boil it for 5 minutes . It is ready to be served .

 

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz