ಕಾಯಿ ಬಜ್ಜಿ | Kayi Bajji recipe in Kannada

By

ಕಾಯಿ ಬಜ್ಜಿ

ಬೇಕಾಗುವ ಸಾಮಗ್ರಿಗಳು:
ತೆಂಗಿನ ತುರಿ 1/2 ಕಪ್
ಟೊಮೆಟೊ 2
ಈರುಳ್ಳಿ 1/2
ಬೆಳ್ಳುಳ್ಳಿ 5 ಎಸಳು
ಹುರಿಗಡ್ಲೆ 1ಚಮಚ
ಸಾರಿನ ಪುಡಿ 2 ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ:
ಎಣ್ಣೆ 1ಚಮಚ
ಸಾಸಿವೆ 1/4 ಚಮಚ
ಈರುಳ್ಳಿ 1/2 ಹೆಚ್ಚಿದ್ದು
ಬೆಳ್ಳುಳ್ಳಿ 5ಎಸಳು ಜಜ್ಜಿದ್ದು
ಒಣಮೆಣಸಿನಕಾಯಿ 2
ಕರಿಬೇವು ಸ್ವಲ್ಪ

ಮಾಡುವ ವಿಧಾನ:
ತೆಂಗಿನ ತುರಿ ಈರುಳ್ಳಿ ಟೊಮೆಟೊ ಕೊತ್ತಂಬರಿ ಸೊಪ್ಪು ಬೆಳ್ಳುಳ್ಳಿ ಸಾರಿನ ಪುಡಿ ಮತ್ತು ಹುರಿಗಡ್ಲೆ ಸೇರಿಸಿ ರುಬ್ಬಿಕೊಳ್ಳಿ.
ಒಂದು ಪಾತ್ರೆಗೆ ಒಗ್ಗರಣೆ ಮಾಡಿ ರುಬ್ಬಿದ ಮಿಶ್ರಣ ಮತ್ತು ಉಪ್ಪು ಅಗತ್ಯವಿದ್ದಷ್ಟು ನೀರು ಸೇರಿಸಿ ಹಸಿವಾಸನೆ ಹೋಗುವರೆಗೂ ಕುದಿಸಿದರೆ ರುಚಿಯಾದ ಕಾಯಿಬಜ್ಜಿ ರೆಡಿ.

ಟೊಮೆಟೊ ಬದಲು ಹುಣಸೆ ಹಣ್ಣನ್ನು ಉಪಯೋಗಿಸಬಹುದು.

ಸಾರಿನ ಪುಡಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ

20190427_140306-01

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz