ಮೆಂತ್ಯ ಕಡುಬು | Mentya Kadabu recipe in Kannada and English

By

ಮೆಂತ್ಯ ಕಡುಬು|Mentya Kadabu

ಬೇಕಾಗುವ ಸಾಮಗ್ರಿಗಳು :
ಮೆಂತ್ಯ ಸೊಪ್ಪು – 1 ಕಟ್ಟು
ಚಪಾತಿ ಹಿಟ್ಟು – 1 ಕಪ್
ಅರಿಶಿಣ ಸೇರಿಸಿ ಬೇಯಿಸಿದ ತೊಗರಿಬೇಳೆ – 1 ಕಪ್
ಟೊಮೆಟೊ – 1 ಮೀಡಿಯಮ್ ಸೈಜ್
ಈರುಳ್ಳಿ – 1 ಮೀಡಿಯಮ್ ಸೈಜ್
ಬೆಳ್ಳುಳ್ಳಿ – 1 ಗಡ್ಡೆ
ಕೊತ್ತಂಬರಿ ಸೊಪ್ಪು
ಹಸಿಮೆಣಸಿನಕಾಯಿ 5-6
ಕರಿಬೇವು ಸ್ವಲ್ಪ
ಎಣ್ಣೆ – 2 ಟೇಬಲ್ ಸ್ಪೊನ್
ಸಾಸಿವೆ – 1/2 ಟೇಬಲ್ ಸ್ಪೊನ್
ಜೀರಿಗೆ – 1/2 ಟೇಬಲ್ ಸ್ಪೊನ್
ಅರಿಶಿಣ
ಕೆಂಪು ಮೆಣಸಿನಕಾಯಿ – 2
ಉಪ್ಪು

Required Ingredients:
Fenugreek Leaves – 1 Cup
Chapati Dough – 1 Cup
Toor Dal cooked with a pinch of turmeric – 1 Cup
Tomato – 1 (medium)
Onion – 1 (medium)
Garlic – 1 (small – whole)
Coriander Leaves
Green Chilly – 5 to 6
Curry Leaves – A few
Oil – 2 Table Spoon
Mustard – 1/2 Table Spoon
Fennel – 1/2 Table Spoon
Turmeric
Red Chilly – 2
Salt

ಮಾಡುವ ವಿಧಾನ/method:
4 ಚಪಾತಿ ಲಟ್ಟಿಸಿ ಶಂಕರ ಪೋಳಿಯ ಹಾಗೆ ಕತ್ತರಿಸಿ.
Roll down 4 chapati’s and cut them into small square shapes.

ಕುದಿಯುವ ನೀರಿನಲ್ಲಿ 10 ನಿಮಿಷ ಬೇಯಿಸಿ.
Cook the above in boiling water for 10 mins.

ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಮಿಕ್ಸಿಗೆ ಹಾಕಿ ತರಿ ತರಿಯಾಗಿ ಮಾಡಿಕೊಳ್ಳಿ.
Grind – green chilli, garlic and coriander leaves into a fine mixture.

ಬಾಣಲೆಗೆ 1ಟೇಬಲ್ ಸ್ಪೂನ್ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಕರಿಬೇವು, ಕೆಂಪು ಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ. ನಂತರ ಹೆಚ್ಚಿದ ಈರುಳ್ಳಿ, ಟೊಮೆಟೊ, ಅರಿಶಿನ ಪುಡಿ, ತರಿ ಮಾಡಿದ ಮಸಾಲೆ ಮತ್ತು ಮೆಂತ್ಯ ಸೊಪ್ಪು ಹಾಕಿ ಹಸಿ ವಾಸನೆ ಹೋಗು ವರೆಗೂ ಹುರಿಯಿರಿ.
Take a pan and add – a tablespoon of oil, mustard, fennel, curry leaves, red chilli and prepare the seasoning. Once done, add chopped onions-tomato, the mixture from the above step & fenugreek leaves and fry until the rawness has reduced.

ನಂತರ ಬೇಯಿಸಿದ ತೊಗರಿಬೇಳೆ ಮತ್ತು ಉಪ್ಪು ಹಾಕಿ ಕುದಿಸಿ.
Add the cooked Toor dal, salt into the pan and let it boil.

ಕುದಿ ಬಂದ ನಂತರ ಬೇಯಿಸಿದ ಚಪಾತಿ ನೀರು ಸಮೇತ ಹಾಕಿ 2-3 ನಿಮಿಷ ಕುದಿಸಿ.
Add the cooked chapati along with the water and let it be in the heat for 2-3 mins.

ಕೊತ್ತಂಬರಿ ಸೊಪ್ಪು ಇಂದ ಅಲಂಕರಿಸಿ ಬಿಸಿ ಇರುವಾಗಲೇ ಬಡಿಸಿ.
Dress it with coriander leaf and serve while it’s hot.

ಮೆಂತ್ಯ ಕಡುಬು|Mentya Kadabu recipe in Kannada and English

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz