ಸಿಹಿ ಮತ್ತು ಖಾರಾ ಪೊಗಂಲ್ | Sweet & Khara Pongal recipe in Kannada

By

ಸಿಹಿ ಮತ್ತು ಖಾರಾ ಪೊಗಂಲ್

ಸಿಹಿ ಪೊಗಂಲ್

ಬೇಕಾಗುವ ಸಾಮಗ್ರಿಗಳು:
ಅಕ್ಕಿ 1ಕಪ್
ಹೆಸರುಬೇಳೆ 1ಕಪ್
ನೀರು 5ಕಪ್
ಹಾಲು 1ಕಪ್
ತುಪ್ಪ 2ಚಮಚ
ದ್ರಾಕ್ಷಿ
ಗೋಡಂಬಿ
ಏಲಕ್ಕಿ ಪುಡಿ

ಮಾಡುವ ವಿಧಾನ:
ಹೆಸರುಬೇಳೆ ಮತ್ತು ಅಕ್ಕಿ ತೊಳೆದು 5 ಕಪ್ ನೀರು ಸೇರಿಸಿ ಬೇಯಿಸಿ ಕೊಳ್ಳಿ. ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಒಲೆಯ ಮೇಲಿಟ್ಟು ಕರಗಿಸಿ ಶೋಧಿಸಿಕೊಳ್ಳಿ. ಒಂದು ಬಾಣಲೆಗೆ ಬೇಯಿಸಿದ ಅಕ್ಕಿ ಬೇಳೆ, ಕರಗಿಸಿದ ಬೆಲ್ಲ ಮತ್ತು ಹಾಲು ಸೇರಿಸಿ ಮಿಕ್ಸ್ ಮಾಡಿ ಕೈಯಾಡಿಸಿ 5 ನಿಮಿಷ ಮುಚ್ಚಿಡಿ. ಕೊನೆಯದಾಗಿ ಏಲಕ್ಕಿ ಪುಡಿ ತುಪ್ಪದಲ್ಲಿ ಉರಿದ ದ್ರಾಕ್ಷಿ ಗೋಡಂಬಿಯನ್ನು ಸೇರಿಸಿ.

ಖಾರಾ ಪೊಗಂಲ್

ಬೇಕಾಗುವ ಸಾಮಗ್ರಿಗಳು:
ಅಕ್ಕಿ 1ಕಪ್
ಹೆಸರುಬೇಳೆ 1ಕಪ್
ಅರಿಶಿನ ಸ್ವಲ್ಪ
ನೀರು 5ಕಪ್
ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ:
ಎಣ್ಣೆ /ತುಪ್ಪ 2ಚಮಚ
ಸಾಸಿವೆ ಸ್ವಲ್ಪ
ಜೀರಿಗೆ 1/2 ಚಮಚ
ಕಾಳುಮೆಣಸು 1/2 ಚಮಚ
ಕರಿಬೇವು ಸ್ವಲ್ಪ
ಹಸಿಮೆಣಸಿನಕಾಯಿ 2
ಗೋಡಂಬಿ ಸ್ವಲ್ಪ
ಅರಿಶಿನ ಸ್ವಲ್ಪ

ಮಾಡುವ ವಿಧಾನ:
ಹೆಸರುಬೇಳೆ ಮತ್ತು ಅಕ್ಕಿ ತೊಳೆದು 5 ಕಪ್ ನೀರು ಮತ್ತು ಅರಿಶಿನ ಸೇರಿಸಿ ಬೇಯಿಸಿ ಕೊಳ್ಳಿ. ಒಂದು ಪಾತ್ರೆಯಲ್ಲಿ ಒಗ್ಗರಣೆ ಮಾಡಿ ಬೇಯಿಸಿದ ಅಕ್ಕಿ ಬೇಳೆ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಖಾರಾ ಪೊಗಂಲ್ ರೆಡಿ.

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz