ಬೇಳೆ ಸಾರು
ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ 2ಕಪ್
ಟೊಮೆಟೊ 2
ಅರಿಶಿನ ಸ್ವಲ್ಪ
ಸಾರಿನ ಪುಡಿ 1 1/2ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು ಸ್ವಲ್ಪ
ಒಗ್ಗರಣೆಗೆ:
ಎಣ್ಣೆ 1ಚಮಚ
ಸಾಸಿವೆ 1/2 ಚಮಚ
ಒಣಮೆಣಸಿನಕಾಯಿ 2
ಇಂಗು ಸ್ವಲ್ಪ ಅಥವಾ ಜಜ್ಜಿದ ಬೆಳ್ಳುಳ್ಳಿ 6 ಎಸಳು
ಕರಿಬೇವು ಸ್ವಲ್ಪ
ಮಾಡುವ ವಿಧಾನ:
ತೊಗರಿಬೇಳೆ ಅರಿಶಿನ ಟೊಮೆಟೊ ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ ಕೊಳ್ಳಿ ನಂತರ ಸಾರಿನ ಪುಡಿ ಮತ್ತು ಉಪ್ಪು ಸೇರಿಸಿ ಕುದಿಸಿ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ ಒಗ್ಗರಣೆ ಮಾಡಿದರೆ ಸಿಂಪಲ್ ಆದ ಬೇಳೆ ಸಾರು ರೆಡಿ.
ಸಾರಿನ ಪುಡಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ