ಗುಂಡು ಬದನೆ ಪಪ್ಪು
ಬೇಕಾಗುವ ಸಾಮಗ್ರಿಗಳು:
ಗುಂಡುಬದನೆ 5
ತೊಗರಿಬೇಳೆ 2ಕಪ್
ಹಸಿಮೆಣಸಿನಕಾಯಿ 15
ಬೆಳ್ಳುಳ್ಳಿ 5 ಎಸಳು
ಈರುಳ್ಳಿ 1
ಟೊಮೆಟೊ 2
ಹುಣಸೆ ಹಣ್ಣು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ:
ಎಣ್ಣೆ 1ಚಮಚ
ಸಾಸಿವೆ ಸ್ವಲ್ಪ
ಒಣಮೆಣಸಿನಕಾಯಿ 2
ಬೆಳ್ಳುಳ್ಳಿ 5ಎಸಳು ಜಜ್ಜಿದ್ದು
ಕರಿಬೇವು ಸ್ವಲ್ಪ
ಮಾಡುವ ವಿಧಾನ:
ಹುಣಸೆಹಣ್ಣುನ್ನು ನೀರಿನಲ್ಲಿ ನೆನಸಿ ಕಿವುಚಿ ರಸ ತೆಗೆದಿಡಿ.
ಗುಂಡುಬದನೆ ಈರುಳ್ಳಿ ಟೊಮೆಟೊ ಹೆಚ್ಚಿಕೊಳ್ಳಿ.
ಕುಕ್ಕರ್ ಗೆ ತೊಗರಿಬೇಳೆ ಅರಿಶಿನ ಈರುಳ್ಳಿ ಬೆಳ್ಳುಳ್ಳಿ ಟೊಮೆಟೊ ಕೊತ್ತಂಬರಿ ಸೊಪ್ಪು ಸ್ವಲ್ಪ ಹಸಿಮೆಣಸಿನಕಾಯಿ ಬದನೆಕಾಯಿ ಸ್ವಲ್ಪ ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ ಕೊಳ್ಳಿ.
ತಣ್ಣಾಗಾದ ಮೇಲೆ ನೀರು ಬಸಿದು ಮಸೆಯಿರಿ. ನಂತರ ಮಸೆದ ಪದಾರ್ಥಕ್ಕೆ ಬಸಿದ ನೀರು ಉಪ್ಪು ಅರಿಶಿನ ಸೇರಿಸಿ ಕುದಿಯಲು ಇಡಿ. ಕುದಿ ಬಂದಮೇಲೆ ಹುಣಸೆ ರಸ ಸೇರಿಸಿ ಕುದಿಸಿ ಕೊನೆಯದಾಗಿ ಒಗ್ಗರಣೆ ಮಾಡಿದರೆ ರುಚಿಯಾದ ಗುಂಡುಬದನೆ ಪಪ್ಪು ರೆಡಿ.
ಪಪ್ಪು ಗಟ್ಟಿಯಾಗಿ ಇರಬೇಕು ನೀರು ನೋಡಿ ಹಾಕಿ