ನಿಂಬೆಹಣ್ಣು ಚಿತ್ರಾನ್ನ | Lemon Chitranna recipe in Kannada

By

ನಿಂಬೆಹಣ್ಣು ಚಿತ್ರಾನ್ನ

ಬೇಕಾಗುವ ಸಾಮಗ್ರಿಗಳು:
ನಿಂಬೆಹಣ್ಣು 1
ಹಸಿಮೆಣಸಿನಕಾಯಿ 10
ಅರಿಶಿನ ಸ್ವಲ್ಪ
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಎಣ್ಣೆ 2ಚಮಚ
ಸಾಸಿವೆ 1ಚಮಚ
ಕಡ್ಲೆಬೇಳೆ 1 ಚಮಚ
ಕಡ್ಲೆಕಾಯಿ 2ಚಮಚ
ಉದುರಾದ ಅನ್ನ 2ಕಪ್
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಕಡ್ಲೆಬೇಳೆ ಕಡ್ಲೆಕಾಯಿ ಹಾಕಿ ಕೆಂಪಗೆ ಹುರಿಯಿರಿ ನಂತರ ಅರಿಶಿನ ಸ್ವಲ್ಪ ಕರಿಬೇವು ಹಸಿಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ ಒಲೆ ಆರಿಸಿ.
ನಂತರ ಒಂದು ಅಗಲವಾದ ತಟ್ಟೆಗೆ ಅನ್ನ ಹಾಕಿ ಹರಡಿ ಅದರ ಮೇಲೆ ಒಗ್ಗರಣೆ ಮಾಡಿದ ಮಿಶ್ರಣ ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿ ಕಲಿಸಿದರೆ ರುಚಿಯಾದ ನಿಂಬೆಹಣ್ಣು ಚಿತ್ರಾನ್ನ ರೆಡಿ.

ನಿಂಬೆಹಣ್ಣು ಚಿತ್ರಾನ್ನ |Lemon Chitranna

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz