ಗುಂಡು ಬದನೆ ಗೊಜ್ಜು
ಬೇಕಾಗುವ ಸಾಮಗ್ರಿಗಳು:
ಗುಂಡುಬದನೆ 1/2 ಕೆಜಿ
ಈರುಳ್ಳಿ 3
ಹಸಿಮೆಣಸಿನಕಾಯಿ 5-6
ಟೊಮೆಟೊ 1/4 ಕೆಜಿ
ಉಪ್ಪು ರುಚಿಗೆ ತಕ್ಕಷ್ಟು
ಸಾಸಿವೆ 1/2 ಚಮಚ
ಎಣ್ಣೆ 4ಚಮಚ
ಅರಿಶಿನ ಸ್ವಲ್ಪ
ಒಣಮೆಣಸಿನಕಾಯಿ ಪುಡಿ 2ಚಮಚ
ಮಾಡುವ ವಿಧಾನ:
ಬದನೆ, ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ ಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಈರುಳ್ಳಿ, ಟೊಮೆಟೊ, ಬದನೆಕಾಯಿ ಮತ್ತು ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಿ. ಉಪ್ಪು ಅರಿಶಿನ ಸ್ವಲ್ಪ ನೀರು ಚುಮಿಕಿಸಿ ಮುಚ್ಚಲ ಮುಚ್ಚಿ ಮೆತ್ತಾಗಾಗುವರೆಗೂ ಬೇಯಿಸಿ. ಕೊನೆಯದಾಗಿ ಒಣಮೆಣಸಿನಕಾಯಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಎರಡು ನಿಮಿಷ ಮುಚ್ಚಿಡಿ. ಈಗ ರುಚಿಯಾದ ಗುಂಡು ಬದನೆ ಗೊಜ್ಜು ರೆಡಿ.
ಇದನ್ನು ಬಿಸಿ ಅನ್ನಕ್ಕೆ ಕಲಸಿ ತಿನ್ನಬಹುದು. ದೋಸೆ ಚಪಾತಿ ರೊಟ್ಟಿ ಯಾವುದಕಾದರೂ ಸರಿ ಜೊತೆಯಾಗುತ್ತೆ.
Nice website