ಮಟನ್ ಡ್ರೈ | Mutton Dry recipe in Kannada

ಮಟನ್ ಡ್ರೈ

ಬೇಕಾಗುವ ಸಾಮಗ್ರಿಗಳು:
ಮಟನ್ 1/2 ಕೆಜಿ
ಈರುಳ್ಳಿ 2
ಟೊಮೆಟೊ 2
ಹಸಿಮೆಣಸಿನಕಾಯಿ 4-5
ಕೊತ್ತಂಬರಿ ಸೊಪ್ಪು ಸ್ವಲ್ಪ
ದನಿಯಾ ಪುಡಿ 1ಚಮಚ
ಒಣಮೆಣಸಿನಕಾಯಿ ಪುಡಿ 2ಚಮಚ
ಗರಂ ಮಸಾಲ 1ಚಮಚ
ಅರಿಶಿನ ಸ್ವಲ್ಪ
ನಿಂಬೆ ರಸ 2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 2ಚಮಚ
ನೀರು 1/4ಕಪ್

ಮಾಡುವ ವಿಧಾನ:
ಈರುಳ್ಳಿ ಟೊಮೆಟೊ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸಿನಕಾಯಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ.

ಒಂದು ಕುಕ್ಕರ್ ಗೆ ಮಟನ್, ಈರುಳ್ಳಿ, ಟೊಮೆಟೊ, ಅರಿಶಿನ, ಉಪ್ಪು, ದನಿಯಾ ಪುಡಿ, ಒಣಮೆಣಸಿನಕಾಯಿ ಪುಡಿ, ಗರಂ ಮಸಾಲ ಪುಡಿ, ನೀರು ಸೇರಿಸಿ ಮುಚ್ಚಲ ಮುಚ್ಚಿ 3-4 ಕೂಗಿಸಿ. ಕುಕ್ಕರ್ ತಣ್ಣಾಗಾದ ಮೇಲೆ ಓಲೆಯ ಮೇಲೆ ಇಟ್ಟು ನೀರಿನಂಶ ಹೋಗುವರೆಗೂ ಕೈಯಾಡಿಸಿ. ಪೂರ್ತಿಯಾಗಿ ಡ್ರೈ ಆಗಬೇಕು. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಿ ನಂತರ ಬೇಯಿಸಿದ ಮಟನ್ ಸೇರಿಸಿ ಕಡಿಮೆ ಉರಿಯಲ್ಲಿ ಐದು ನಿಮಿಷ ಮುಚ್ಚಿಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಮಟನ್ ಡ್ರೈ ತಿನ್ನಲು ರೆಡಿ.

ಮಟನ್ ಡ್ರೈ | Mutton Dry

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asiawww.bugunmersin.com - www.eskisehirescort.asia