ಮಂಗಳೂರು ಸೌತೆಕಾಯಿ ಹುಳಿ
ಬೇಕಾಗುವ ಸಾಮಗ್ರಿಗಳು:
ಮಂಗಳೂರು ಸೌತೆಕಾಯಿ 1
ತೊಗರಿಬೇಳೆ 1ಕಪ್
ಟೊಮೆಟೊ 1
ಅರಿಶಿನ ಸ್ವಲ್ಪ
ತೆಂಗಿನ ತುರಿ 1/4 ಕಪ್
ಹುಣಸೆ ಹಣ್ಣು ಸಣ್ಣ ನಿಂಬೆ ಗಾತ್ರ
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ:
ಎಣ್ಣೆ 1ಚಮಚ
ಸಾಸಿವೆ 1/2ಚಮಚ
ಕರಿಬೇವು ಸ್ವಲ್ಪ
ಒಣಮೆಣಸಿನ ಕಾಯಿ 2
ಇಂಗು ಸ್ವಲ್ಪ
ಪುಡಿ ಮಾಡಲು:
ಧನಿಯ 2ಚಮಚ
ಬ್ಯಾಡಗಿ ಮೆಣಸಿನಕಾಯಿ 6
ಗುಂಟೂರು ಮೆಣಸಿನಕಾಯಿ 6
ಕಡ್ಲೆಬೇಳೆ 1ಚಮಚ
ಕರಿಬೇವು ಸ್ವಲ್ಪ
ಸಾಸಿವೆ ಚಿಟಕಿ
ಮೆಂತ್ಯ ಚಿಟಕಿ
ಇಂಗು ಸ್ವಲ್ಪ
ಇಷ್ಟನ್ನು ಹುರಿದು ಪುಡಿ ಮಾಡಿಕೊಳ್ಳಿ. ಇದಕ್ಕೆ ತೆಂಗಿನ ತುರಿ ಮತ್ತು ಹುಣಸೆಹಣ್ಣು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಮಾಡುವ ವಿಧಾನ:
ತೊಗರಿಬೇಳೆ ಅರಿಶಿನ ಮತ್ತು ಟೊಮೆಟೊ ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ ಕೊಳ್ಳಿ. ಸೌತೆಕಾಯಿ ಯನ್ನು ತೊಳೆದು ದಪ್ಪ ಹೋಳುಗಳಾಗಿ ಹೆಚ್ಚಿಕೊಳ್ಳಿ.
ಒಂದು ಪಾತ್ರೆಯಲ್ಲಿ ಸೌತೆಕಾಯಿ ಯನ್ನು ಬೇಯಲು ಇಡಿ. ಅರ್ಧ ಬೆಂದ ನಂತರ ರುಬ್ಬಿದ ಮಿಶ್ರಣ ಉಪ್ಪು ಹಾಕಿ ಕುದಿಯಲು ಬಿಡಿ. ಕೊನೆಯದಾಗಿ ಬೇಯಿಸಿದ ಬೇಳೆ ಸೇರಿಸಿ ಮಿಕ್ಸ್ ಮಾಡಿ ಕುದಿಸಿ ಒಗ್ಗರಣೆ ಮಾಡಿದರೆ ರುಚಿಯಾದ ಹುಳಿ ರೆಡಿ.