ಟೊಮೆಟೊ ತಿಳಿಸಾರು
ಬೇಕಾಗುವ ಸಾಮಗ್ರಿಗಳು:
ಟೊಮೆಟೊ 4
ಹುಣಸೆ ರಸ 3ಚಮಚ
ತಿಳಿಸಾರು ಪುಡಿ 2ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಅರಿಶಿನ ಸ್ವಲ್ಪ
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಒಗ್ಗರಣೆಗೆ:
ಎಣ್ಣೆ /ತುಪ್ಪ 1ಚಮಚ
ಸಾಸಿವೆ 1/4 ಚಮಚ
ಒಣಮೆಣಸಿನ ಕಾಯಿ 2
ಕರಿಬೇವು ಸ್ವಲ್ಪ
ಇಂಗು ಸ್ವಲ್ಪ
ತಿಳಿಸಾರು ಪುಡಿ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಮಾಡುವ ವಿಧಾನ:
ಟೊಮೆಟೊ ಕುಕ್ಕರ್ ನಲ್ಲಿ ಬೇಯಿಸಿ ಕೊಳ್ಳಿ. ತಣ್ಣಾಗಾದ ಮೇಲೆ ಟೊಮೆಟೊ ತೆಗೆದು ಕಿವಿಚುಕೊಳ್ಳಿ. ನಂತರ ಇದಕ್ಕೆ ಹುಣಸೆ ರಸ, ಅರಿಶಿನ, ತಿಳಿಸಾರು ಪುಡಿ, ಉಪ್ಪು, ಕರಿಬೇವು ಸ್ವಲ್ಪ ಮತ್ತು ಅಗತ್ಯ ಇದ್ದಷ್ಟು ನೀರು ಸೇರಿಸಿ ಕುದಿಸಿ ನಂತರ ಒಗ್ಗರಣೆ ಮಾಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ.
1 Comment
Nalini
Super fantastic mind gloing