ಇಡ್ಲಿ ಸಾಂಬರ್
ಇಡ್ಲಿ
ಬೇಕಾಗುವ ಸಾಮಗ್ರಿಗಳು:
ಇಡ್ಲಿ ಅಕ್ಕಿ 3ಕಪ್
ಉದ್ದಿನಬೇಳೆ 1 ಕಪ್
ಸಬ್ಬಕ್ಕಿ 1ಕಪ್
ಮೆಂತ್ಯ 1ಚಮಚ
ಮಾಡುವ ವಿಧಾನ:
ಬೆಳಿಗ್ಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ನೀರಿನಲ್ಲಿ ತೊಳೆದು ಬೇರೆ ಬೇರೆಯಾಗಿ ನೆನೆಸಿಡಿ.
ಸಂಜೆ ನೀರು ಬಸಿದು ಅಕ್ಕಿ ಯನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ. ಉದ್ದಿನಬೇಳೆ ಮೆಂತ್ಯ ಮತ್ತು ಸಬ್ಬಕ್ಕಿಯನ್ನು ನುಣ್ಣಗೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಈಗ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಇಡ್ಲಿ ಹದಕ್ಕೆ ಹಿಟ್ಟನ್ನು ಕಲಿಸಿಡಿ.
ಮಾರನೆ ದಿನ ಬೆಳಿಗ್ಗೆ ಉಪ್ಪು ಸೇರಿಸಿ ಕಲಸಿ ಎಣ್ಣೆ ಸವರಿದ ಇಡ್ಲಿ ತಟ್ಟೆಯಲ್ಲಿ ಹಾಕಿ 15 ನಿಮಿಷ ಆವಿಯಲ್ಲಿ ಬೇಯಿಸಿ. ನಂತರ 10 ನಿಮಿಷ ಬಿಟ್ಟು ಚಮಚದ ಸಹಾಯದಿಂದ ಇಡ್ಲಿ ಯನ್ನು ತೆಗೆಯಿರಿ.
ಸಾಂಬರ್
ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ 1ಕಪ್
ಟೊಮೆಟೊ 1
ಈರುಳ್ಳಿ 1
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಅರಿಶಿನ ಸ್ವಲ್ಪ
ಇಂಗು ಸ್ವಲ್ಪ
ಹುಣಸೆ ರಸ 4ಚಮಚ
ಸಾರಿನ ಪುಡಿ 2ಚಮಚ
ಎಣ್ಣೆ 1ಚಮಚ
ಸಾಸಿವೆ 1/2 ಚಮಚ
ಒಣಮೆಣಸಿನ ಕಾಯಿ 2
ಮಾಡುವ ವಿಧಾನ:
ತೊಗರಿಬೇಳೆ ಅರಿಶಿನ ಮತ್ತು ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ ಕೊಳ್ಳಿ. ಈರುಳ್ಳಿ ಟೊಮೆಟೊ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಕೊಳ್ಳಿ. ಹುಣಸೆ ರಸ, 1ಕಪ್ ನೀರು, ಸಾರಿನ ಪುಡಿ ಸೇರಿಸಿ ಕಲಸಿ ಕುದಿಯಲು ಇಡಿ. ಇದಕ್ಕೆ ಹೆಚ್ಚಿದ ಈರುಳ್ಳಿ ಟೊಮೆಟೊ ಹಾಕಿ ಹಸಿವಾಸನೆ ಹೋಗುವರೆಗೂ ಕುದಿಸಿ ನಂತರ ಇದಕ್ಕೆ ಬೇಯಿಸಿದ ತೊಗರಿಬೇಳೆ ಉಪ್ಪು ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಒಗ್ಗರಣೆ ಮಾಡಿದರೆ ರುಚಿಯಾದ ಸಾಂಬರ್ ರೆಡಿ.
ಎಣ್ಣೆ ಸಾಸಿವೆ ಇಂಗು ಕರಿಬೇವು ಒಣಮೆಣಸಿನ ಕಾಯಿ ಹಾಕಿ ಒಗ್ಗರಣೆ ಮಾಡಿ.