ಜುಣಕ
ಬೇಕಾಗುವ ಸಾಮಗ್ರಿಗಳು:
ಕಡ್ಲೆಹಿಟ್ಟು 3ಚಮಚ
ಈರುಳ್ಳಿ 1
ಬೆಳ್ಳುಳ್ಳಿ 1ಗಡ್ಡೆ
ಟೊಮೆಟೊ 1
ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 4-5
ಕರಿಬೇವು ಸ್ವಲ್ಪ
ಎಣ್ಣೆ 1ಚಮಚ
ಸಾಸಿವೆ 1/2 ಚಮಚ
ಅರಿಶಿನ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಜೀರಿಗೆ 1/2 ಚಮಚ
ಶುಂಠಿ ಸ್ವಲ್ಪ
ಮಾಡುವ ವಿಧಾನ:
ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿ ಯನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ. ಕಡ್ಲೆಹಿಟ್ಟುನ್ನು ಸ್ವಲ್ಪ ನೀರು ಸೇರಿಸಿ ಗಂಟಿಲ್ಲಂದಂತೆ ಕಲಸಿ ಇಡಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಮತ್ತು ಜೀರಿಗೆ ಹಾಕಿ ಸಿಡಿಸಿ ನಂತರ ಈರುಳ್ಳಿ ಕರಿಬೇವು ಟೊಮೆಟೊ ಹಾಕಿ ಮೆತ್ತಾಗಾಗುವರೆಗೂ ಹುರಿಯಿರಿ. ಈಗ ರುಬ್ಬಿದ ಮಿಶ್ರಣ ಮತ್ತು ಅರಿಶಿನ ಸೇರಿಸಿ ಹಸಿವಾಸನೆ ಹೋಗುವರೆಗೂ ಹುರಿಯಿರಿ. ನಂತರ ನೀರಿನಲ್ಲಿ ಕಲಿಸಿದ ಕಡ್ಲೆಹಿಟ್ಟು ಉಪ್ಪು ಸ್ವಲ್ಪ ನೀರು ಸೇರಿಸಿ ಕುದಿಸಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಜುಣಕ ರೆಡಿ.
ಇದು ರೊಟ್ಟಿ ಚಪಾತಿ ದೋಸೆ ಇಡ್ಲಿ ಯಾವುದಕಾದರೂ ಸರಿ ಜೊತೆಯಾಗುತ್ತೆ.