ಚೌಚೌ ಬಾತ್/ಉಪ್ಪಿಟ್ಟು ಕೇಸರಿ ಬಾತ್
ಉಪ್ಪಿಟ್ಟು
ಬೇಕಾಗುವ ಸಾಮಗ್ರಿಗಳು:
ಉಪ್ಪಿಟ್ಟು ರವೆ 1ಕಪ್
ಎಳೆ ಅವರೆಕಾಳು 1ಕಪ್
ಸಬ್ಸಿಗೆ ಸೊಪ್ಪು ಸ್ವಲ್ಪ
ಈರುಳ್ಳಿ 1
ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 6
ಕಾಯಿತುರಿ 2ಚಮಚ
ಎಣ್ಣೆ 2ಚಮಚ
ಸಾಸಿವೆ 1/2 ಚಮಚ
ಕರಿಬೇವು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ನೀರು 3ಕಪ್
ನಿಂಬೆ ರಸ 1ಚಮಚ
ತುಪ್ಪ ಸ್ವಲ್ಪ
ಮಾಡುವ ವಿಧಾನ:
ರವೆಯನ್ನು ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ.
ಈರುಳ್ಳಿ, ಹಸಿಮೆಣಸಿನಕಾಯಿ, ಸಬ್ಸಿಗೆ ಸೊಪ್ಪುನ್ನು ಹೆಚ್ಚಿಕೊಳ್ಳಿ.
ನೀರನ್ನು ಕಾಯಲು ಇಡಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಕರಿಬೇವು ಈರುಳ್ಳಿ ಹಸಿಮೆಣಸಿನಕಾಯಿ ಸಬ್ಸಿಗೆ ಸೊಪ್ಪು ಅವರೆಕಾಳು ಹಾಕಿ ಹುರಿಯಿರಿ. ಅವರೆಕಾಳು ಮೆತ್ತಾಗಾದ ನಂತರ ರವೆ ಸೇರಿಸಿ ಕೈಯಾಡಿಸಿ. ಈಗ ಬಿಸಿಯಾದ ನೀರು ಉಪ್ಪು ಸೇರಿಸಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ 5 ನಿಮಿಷ ಮುಚ್ಚಿಡಿ. ನಂತರ ಕೊತ್ತಂಬರಿ ಸೊಪ್ಪು ತೆಂಗಿನ ತುರಿ ತುಪ್ಪ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಉಪ್ಪಿಟ್ಟು ರೆಡಿ.
ಕೇಸರಿ ಬಾತ್
ಬೇಕಾಗುವ ಸಾಮಗ್ರಿಗಳು:
ಚಿರೋಟಿ ರವೆ 1ಕಪ್
ಸಕ್ಕರೆ 1ಕಪ್
ತುಪ್ಪ 1/2ಕಪ್
ಬಿಸಿ ನೀರು 2ಕಪ್
ದ್ರಾಕ್ಷಿ
ಗೋಡಂಬಿ
ಏಲಕ್ಕಿ ಪುಡಿ ಸ್ವಲ್ಪ
ಅರಿಶಿನ /ಫುಡ್ ಕಲರ್ ಸ್ವಲ್ಪ
ಮಾಡುವ ವಿಧಾನ:
ಒಂದು ಬಾಣಲೆಗೆ 2 ಚಮಚ ತುಪ್ಪ ಹಾಕಿ ಬಿಸಿಯಾದ ಮೇಲೆ ದ್ರಾಕ್ಷಿ ಗೋಡಂಬಿಯನ್ನು ಹಾಕಿ ಹುರಿದು ತೆಗೆದಿಡಿ. ಅದೇ ಬಾಣಲೆಗೆ ರವೆ ಅರಿಶಿನ ಸೇರಿಸಿ 5 ನಿಮಿಷ ಹುರಿಯಿರಿ ನಂತರ ಸ್ವಲ್ಪ ಸ್ವಲ್ಪವೆ ಬಿಸಿನೀರನ್ನು ಸೇರಿಸಿ ಗಂಟಿಲ್ಲಂದಂತೆ ಕೈಯಾಡಿಸಿ ರವೆ ಬೇಯುವರೆಗೂ ಮುಚ್ಚಿಡಿ.
ಈಗ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸಕ್ಕರೆ ಕರಗಿದಾಗ ಉಳಿದ ತುಪ್ಪ ದ್ರಾಕ್ಷಿ ಗೋಡಂಬಿ ಮತ್ತು ಏಲಕ್ಕಿ ಪುಡಿ ಸೇರಿಸಿ ಕೈಯಾಡಿಸಿ ಕಡಿಮೆ ಉರಿಯಲ್ಲಿ 5 ನಿಮಿಷ ಮುಚ್ಚಿಡಿ. ಈಗ ರುಚಿಯಾದ ಕೇಸರಿ ಬಾತ್ ತಿನ್ನಲು ರೆಡಿ.
