ಸುಟ್ಟ ಬದನೆ | Sutt Badne recipe in Kannada

By

ಸುಟ್ಟ ಬದನೆ

ಬೇಕಾಗುವ ಸಾಮಗ್ರಿಗಳು:
ಗುಂಡು ಬದನೆ 4
ಬೆಳ್ಳುಳ್ಳಿ 10 ಎಸಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಈರುಳ್ಳಿ 1
ಟೊಮೆಟೊ 1
ಹಸಿಮೆಣಸಿನಕಾಯಿ 5-6
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಗುಂಡು ಬದನೆ ಮತ್ತು ಹಸಿಮೆಣಸಿನಕಾಯಿಯನ್ನು ಒಲೆಯ ಮೇಲೆ ಇಟ್ಟು ಸುಟ್ಟು ಕೊಳ್ಳಿ. ಬದನೆ ತಣ್ಣಾಗಾದ ಮೇಲೆ ಸಿಪ್ಪೆ ತೆಗೆದು ಮಸೆದು ಕೊಳ್ಳಿ.

ಈರುಳ್ಳಿ ಟೊಮೆಟೊ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ.

ಮಿಕ್ಸಿಗೆ ಅಥವಾ ಕುಟ್ಟಾಣಿಗೆ ಹಸಿಮೆಣಸಿನಕಾಯಿ ಬೆಳ್ಳುಳ್ಳಿ ಹಾಕಿ ತರಿ ತರಿ ಮಾಡಿಕೊಳ್ಳಿ.

ಒಂದು ಬೌಲ್ ಗೆ ಮಸೆದ ಬದನೆ, ಹಸಿಮೆಣಸಿನಕಾಯಿ ಬೆಳ್ಳುಳ್ಳಿ ತರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಈರುಳ್ಳಿ, ಟೊಮೆಟೊ ಉಪ್ಪು ಸೇರಿಸಿ ಕಲಸಿದರೆ ರುಚಿಯಾದ ಸುಟ್ಟ ಬದನೆ ರೆಡಿ.

ಇದನ್ನು ದೋಸೆ, ರೊಟ್ಟಿ, ಚಪಾತಿಗೆ ಜೊತೆಯಾಗುತ್ತೆ. ಇದಕ್ಕೆ ಮೊಸರು ಸೇರಿಸಿ ಕಲಸಿ ಉಪಯೋಗಿಸಿದರು ರುಚಿಯಾಗಿ ಇರುತ್ತದೆ.

ಸುಟ್ಟ ಬದನೆ | Sutt Badne

Leave a Comment

Your email address will not be published.

This site uses Akismet to reduce spam. Learn how your comment data is processed.

You may also like

www.bugunmersin.com - www.eskisehirescort.asia