ತುಪ್ಪ
ಬೆಣ್ಣೆ ಮಾಡುವ ವಿಧಾನ:
ಹಾಲನ್ನು ಸಣ್ಣ ಉರಿಯಲ್ಲಿ ಕೆನೆ ಬರುವವರೆಗೆ ಕಾಯಿಸಿ. ತಣ್ಣಾಗಾದ ನಂತರ ಕೆನೆಯನ್ನು ತೆಗೆದು ಒಂದು ಗಾಜಿನ ಬಾಟಲ್ ಗೆ ಹಾಕಿ ಸ್ವಲ್ಪ ಮಜ್ಜಿಗೆ ಅಥವಾ ಮೊಸರು ಸೇರಿಸಿ. ಪ್ರತಿಸಲ ಕೆನೆ ಹಾಕಿದಾಗಲೂ ಮಜ್ಜಿಗೆ ಅಥವಾ ಮೊಸರು ಹಾಕಿ. ಬಾಟಲ್ ತುಂಬಿದ ಮೇಲೆ 2 ಗಂಟೆ ಫ್ರಿಡ್ಜ್ ನಲ್ಲಿಡಿ. ನಂತರ ಮಿಕ್ಸಿಗೆ ಹಾಕಿ.
ನಾನು 3 ರಿಂದ 4 ಬಾಟಲ್ ಕೆನೆ ಶೇಖರಣೆ ಆದಮೇಲೆ ಬೆಣ್ಣೆ ಮಾಡ್ತೀನಿ.
ತುಪ್ಪ ಮಾಡುವ ವಿಧಾನ:
ಬೆಣ್ಣೆಗೆ ಚಿಟಕಿ ಉಪ್ಪು, ಅರಿಶಿಣ ಮತ್ತು ಒಂದು ವಿಳ್ಯದೆಲೆ ಸೇರಿಸಿ ಕಾಯಲು ಇಡಿ. ಬೆಣ್ಣೆ ಕುದಿಯುವಾಗ ನೊರೆ ನೊರೆಯಾಗಿರುತ್ತದೆ. ನಂತರ ನೊರೆ ಕಡಿಮೆ ಆಗಿ ತಿಳಿಯಾಗುತ್ತದೆ. ಆಗ ತುಪ್ಪ ಆಗಿದೆ ಅಂತ ಅರ್ಥ. ಕೊನೆಯದಾಗಿ ಕಾಳುಮೆಣಸು ಮತ್ತು ಮೆಂತ್ಯ ಪುಡಿ ಸೇರಿಸಿ.
10 ಕಾಳು ಮೆಣಸು ಮತ್ತು 1/4ಚಮಚ ಮೆಂತ್ಯ ಹುರಿದು ಪುಡಿ ಮಾಡಿಕೊಳ್ಳಿ.