ಸಿಹಿ ಮತ್ತು ಖಾರ ಕಡುಬು – ಗೌರಿ ಗಣೇಶ ಹಬ್ಬದ ವಿಶೇಷ | Sweet & Khara Kadbu recipes in Kannada

By

ಸಿಹಿ ಕಡುಬು ಹೂರಣ

ಬೇಕಾಗುವ ಸಾಮಗ್ರಿಗಳು:
ಬೆಲ್ಲ 1 ಕಪ್
ಕಾಯಿತುರಿ 1ಕಪ್
ಬಿಳಿ ಎಳ್ಳು 1/2 ಕಪ್ ಹುರಿದಿದ್ದು
ಏಲಕ್ಕಿ ಪುಡಿ ಸ್ವಲ್ಪ

ಮಾಡುವ ವಿಧಾನ:
ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಕಾಯಲು ಇಡಿ. ಬೆಲ್ಲ ಕರಗಿದ ಮೇಲೆ ಬೇರೆ ಪಾತ್ರೆಗೆ ಸೋಸಿಕಳ್ಳಿ. ಇದಕ್ಕೆ ತೆಂಗಿನ ಕಾಯಿ ತುರಿ, ಎಳ್ಳು ಸೇರಿಸಿ ಗಟ್ಟಿಯಾಗುವರೆಗೂ ಬೇಯಿಸಿ ನಂತರ ಏಲಕ್ಕಿ ಪುಡಿ ಸೇರಿಸಿ ತಣ್ಣಗಾಗಲು ಬಿಡಿ.

ಖಾರ ಕಡುಬು ಹೂರಣ

ಬೇಕಾಗುವ ಸಾಮಗ್ರಿಗಳು:
ಉದ್ದಿನಬೇಳೆ 1ಕಪ್
ಕಡ್ಲೆಬೇಳೆ 1 ಕಪ್
ಹಸಿಮೆಣಸಿನಕಾಯಿ 8-10
ಜೀರಿಗೆ 1 ಸ್ಪೂನ್
ಬೆಳ್ಳುಳ್ಳಿ 15 ಎಸಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಸಬ್ಸಿಗೆ ಸೊಪ್ಪು ಸ್ವಲ್ಪ
ಕರಿಬೇವು ಸ್ವಲ್ಪ
ಈರುಳ್ಳಿ 2 (ಬೇಕಿದ್ದರೆ)
ಶುಂಠಿ ಸ್ವಲ್ಪ

ಮಾಡುವ ವಿಧಾನ:
ಕಡ್ಲೆಬೇಳೆ ಯನ್ನು ತೊಳೆದು 2ಗಂಟೆ ನೆನಸಿಡಿ. ನಂತರ ನೀರು ಬಸಿದು ತರಿತರಿಯಾಗಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ನೆನೆಸಿದ ಉದ್ದಿನಬೇಳೆ, ಮೆಣಸು, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಶುಂಠಿ, ಸೇರಿಸಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಸಬ್ಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು ತೊಳೆದು ಸಣ್ಣ ದಾಗಿ ಹೆಚ್ಚಿ ಕೊಳ್ಳಿ. ಈರುಳ್ಳಿ ಯನ್ನು ಸಣ್ಣಾದಾಗಿ ಹೆಚ್ಚಿ ಕೊಳ್ಳಿ. ರುಬ್ಬಿದ ಕಡ್ಲೆಬೇಳೆ ಗೆ ಎಲ್ಲಾ ಮಿಶ್ರಣ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ ಕೊಳ್ಳಿ.

ಅಕ್ಕಿ ಹಿಟ್ಟು ತಯಾರಿಸುವ ವಿಧಾನ:

ಒಂದುವರೆ ಕಪ್ ನೀರು ಹಾಕಿ ಕುದಿಯಲು ಇಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಚಮಚ ಎಣ್ಣೆ ಹಾಕಿ. ನೀರು ಕುದಿ ಬಂದಮೇಲೆ ಸ್ಟೌವ್ ಆರಿಸಿ ಒಂದು ಕಪ್ ಅಕ್ಕಿ ಹಿಟ್ಟು ಸೇರಿಸಿ ಗಂಟು ಇಲ್ಲದಂತೆ ಕೈಯಾಡಿಸಿ ಇದು ಮುದ್ದೆಯಂತಾಗುತ್ತದೆ. ಮುಚ್ಚಲ ಮುಚ್ಚಿಡಿ. ಅಕ್ಕಿ ಮುದ್ದೆ ಬೆಚ್ಚಗೆ ಇರುವಾಗಲೇ ಚೆನ್ನಾಗಿ ನಾದಿ ಸಣ್ಣ ಸಣ್ಣ ಉಂಡೆ ಮಾಡಿ ಪೂರಿ ಯಂತೆ ಲಟ್ಟಿಸಿಕೊಳ್ಳಿ. ಲಟ್ಟಿಸಿದ ಪೂರಿಗೆ ಸಿಹಿ/ಖಾರ ಹೂರಣ ಹಾಕಿ ಮುಚ್ಚಿ. ತುದಿಯಲ್ಲಿ ನೀರು ಸವರಿ ಒತ್ತಿದರೆ ಹೂರಣ ಈಚೆ ಬರುವುದಿಲ್ಲ. ಅಬೆಯಲ್ಲಿ 10 ನಿಮಿಷ ಬೇಯಿಸಿ. ಕಡುಬು ರೆಡಿ.

ಮಸಾಲೆ ವಡೆ /ಕಡ್ಲೆಬೇಳೆ ವಡೆ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಪುಳಿಯೋಗರೆ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ.

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz