ಪನ್ನೀರ್ ದೊಣ್ಣೆ ಮೆಣಸಿನಕಾಯಿ ಮಸಾಲ (ಪನ್ನೀರ್ ಕ್ಯಾಪ್ಸಿಕಮ್ ಮಸಾಲ)
ಬೇಕಾಗುವ ಸಾಮಗ್ರಿಗಳು:
ದೊಣ್ಣೆ ಮೆಣಸಿನಕಾಯಿ 1/2 ಕೆಜಿ
ಪನ್ನೀರ್ 200 ಗ್ರಾಂ
ಈರುಳ್ಳಿ 2
ಟೊಮೆಟೊ 2
ಹಸಿಮೆಣಸಿನಕಾಯಿ 3
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1ಚಮಚ
ಮೊಸರು 1ಕಪ್ತೆಂಗಿನ ತುರಿ 1/4 ಕಪ್
ಗೋಡಂಬಿ 10
ಅರಿಶಿನ ½ ಚಮಚ
ಕೊತ್ತಂಬರಿ ಸೊಪ್ಪು ½ ಕಪ್
ಧನಿಯ ಪುಡಿ 1ಚಮಚ
ಒಣಮೆಣಸಿನಕಾಯಿ ಪುಡಿ 1ಚಮಚ
ಗರಂ ಮಸಾಲ 1ಚಮಚ
ಜೀರಿಗೆ ಪುಡಿ 1/2 ಚಮಚ
ತುಪ್ಪ 2ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 2ಚಮಚ
ನಿಂಬೆ ರಸ 1ಚಮಚ
ಸಕ್ಕರೆ 1/2 ಚಮಚ
ಮಾಡುವ ವಿಧಾನ:
ಈರುಳ್ಳಿ, ಟೊಮೆಟೊ, ದೊಣ್ಣೆ ಮೆಣಸಿನಕಾಯಿಯನ್ನು ಹೆಚ್ಚಿಕೊಳ್ಳಿ. ಹಸಿಮೆಣಸಿನಕಾಯಿ ಉದ್ದಕ್ಕೆ ಸೀಳಿಕೊಳ್ಳಿ.
ತೆಂಗಿನ ತುರಿ ಮತ್ತು ಗೋಡಂಬಿಯನ್ನು ನುಣ್ಣಗೆ ರುಬ್ಬಿಕೊಳ್ಳಿ.
ಪನ್ನೀರ್ ಅನ್ನು ಕ್ಯೂಬ್ ಆಗಿ ಹೆಚ್ಚಿಕೊಳ್ಳಿ. ನಂತರ ಇದನ್ನು ತವಾ ಮೇಲೆ ಸ್ವಲ್ಪ ತುಪ್ಪ ಹಾಕಿ ಕೆಂಪಗೆ ಫ್ರೈ ಮಾಡಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಹಾಕಿ ಮೆತ್ತಾಗಾಗುವರೆಗೂ ಹುರಿಯಿರಿ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಮತ್ತು ದೊಣ್ಣೆ ಮೆಣಸಿನಕಾಯಿ ಸೇರಿಸಿ ಮಿಕ್ಸ್ ಮಾಡಿ ಐದು ನಿಮಿಷ ಮುಚ್ಚಿ ಬೇಯಲು ಬಿಡಿ. ನಂತರ ಧನಿಯ ಪುಡಿ,ಒಣಮೆಣಸಿನಕಾಯಿ ಪುಡಿ,ಜೀರಿಗೆ ಪುಡಿ, ಅರಿಶಿನ, ತೆಂಗಿನ ತುರಿ ಗೋಡಂಬಿ ಪೇಸ್ಟ್, ಮೊಸರು, ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ಎಣ್ಣೆ ಬಿಡುವವರೆಗೂ ಬೇಯಲು ಬಿಡಿ. ಹಸಿಮೆಣಸಿನಕಾಯಿ, ಗರಂ ಮಸಾಲ ಪುಡಿ ಮತ್ತು ಸಕ್ಕರೆ ಪನ್ನೀರ್ ಸೇರಿಸಿ ಕೈಯಾಡಿಸಿ ಕೊನೆಯದಾಗಿ ತುಪ್ಪ, ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಪನ್ನೀರ್ ದೊಣ್ಣೆ ಮೆಣಸಿನಕಾಯಿ ಮಸಾಲ ರೆಡಿ.
ಇದು ದೋಸೆ, ಚಪಾತಿ, ಅನ್ನದ ಜೊತೆಗೆ ಅದ್ಭುತವಾಗಿರುತ್ತೆ.
Paneer Capsicum Curry
Required Ingredients:
Capsicum ½ kg
Paneer 200 grams
Onion 2
Tomato 2
Green Chilly 3
Ginger Garlic Paste 1 spoon
Curd 1 cup
Grated Coconut ¼ cup
Cashew 10
Turmeric powder ½ spoon
Coriander leaves ½ cup
Coriander Powder 1 spoon
Red Chilly Powder 1 spoon
Garam masala1 spoon
Cumin powder ½ spoon
Ghee 2 spoon
Salt as per taste
Cooking Oil 2 spoon
Lemon Juice 1 spoon
Sugar ½ spoon
Method:
Chop the onions, tomatoes and capsicum. Silt the Green chilies. Make a fine paste of grated coconut and cashews. Cut the paneer into cubes. And fry it on tawa along with ghee until it becomes red.
In a pan add oil and once heated add, onion and fry it until it becomes soft. Then add ginger garlic paste, tomatoes, capsicum and mix it well. Close the lid and allow it to cook. Add coriander powder, red chilly powder, cumin powder, turmeric powder, grated coconut, and cashews paste, curd and salt, and cook it until oil separates from curry. Add green chilies, garam masala, sugar, Paneer and mix it. Finally add ghee, lemon juice, and coriander leaves and mix it and it is done.
You can pair this up with dosa, chapati, and rice.