ಪಾವ್ ಬಾಜಿ | Pav Bhaji recipe in Kannada and English

By

ಪಾವ್ ಬಾಜಿ 

ಬೇಕಾಗುವ ಸಾಮಗ್ರಿಗಳು:
ಪಾವ್ ಬನ್ 6
ಕ್ಯಾರೆಟ್ 100 ಗ್ರಾಂ
ಹಸಿಬಟಾಣಿ 100 ಗ್ರಾಂ
ಕ್ಯಾಪ್ಸಿಕಮ್ 100 ಗ್ರಾಂ
ಆಲೂಗಡ್ಡೆ 100 ಗ್ರಾಂ
ಈರುಳ್ಳಿ 2
ಟೊಮೆಟೊ 2
ಕೊತ್ತಂಬರಿ ಸೊಪ್ಪು ಹೆಚ್ಚಿದ್ದು 1ಕಪ್
ಬೆಣ್ಣೆ 1/2 ಕಪ್ 
ಉಪ್ಪು ರುಚಿಗೆ ತಕ್ಕಷ್ಟು 
ಪಾವ್ ಮಸಾಲ 2 ಚಮಚ
ರೆಡ್ ಚಿಲ್ಲಿ ಪುಡಿ 1 ಚಮಚ
ಎಣ್ಣೆ 2ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ 
ಅರಿಶಿನ 1/2 ಚಮಚ 
ನಿಂಬೆರಸ 1/2 ಚಮಚ

ಮಾಡುವ ವಿಧಾನ:
ಈರುಳ್ಳಿ, ಟೊಮೆಟೊ, ಕ್ಯಾಪ್ಸಿಕಮ್ ಅನ್ನು ಸಣ್ಣಗೆ ಹೆಚ್ಚಿಕೊಳ್ಳಿ. 
ಕ್ಯಾರೆಟ್, ಆಲೂಗಡ್ಡೆ, ಬಟಾಣಿ ಯನ್ನು ಕುಕ್ಕರ್ ನಲ್ಲಿ ಬೇಯಿಸಿ ಕೊಳ್ಳಿ. 
ಒಂದು ಬಾಣಲೆಗೆ ಎಣ್ಣೆ ಮತ್ತು 1 ಚಮಚ ಬೆಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಟೊಮೆಟೊ, ಕ್ಯಾಪ್ಸಿಕಮ್ ಹಾಕಿ ಫ್ರೈ ಮಾಡಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಉಪ್ಪು ಅರಿಶಿಣ ಹಾಕಿ ಮೆತ್ತಾಗಾಗುವರೆಗೂ ಬೇಯಿಸಿ. ನಂತರ ರೆಡ್ ಚಿಲ್ಲಿ ಪುಡಿ, ಪಾವ್ ಮಸಾಲ ಮತ್ತು ಬೇಯಿಸಿದ ತರಕಾರಿ ಸೇರಿಸಿ ಮಿಕ್ಸ್ ಮಾಡಿ ಪುಡಿ ( ಸ್ಮಾಶ್) ಮಾಡಿ  ಸ್ವಲ್ಪ ನೀರು ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಲು ಬಿಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿದರೆ ರುಚಿಯಾದ ಬಾಜಿ ರೆಡಿ.
ಒಂದು ಪ್ಯಾನ್ ಗೆ ಬೆಣ್ಣೆ ಹಾಕಿ ಬಿಸಿಯಾದ ಮೇಲೆ ಮದ್ಯ ಸೀಳಿದ ಪಾವ್ ಬನ್ ಮೇಲ್ಭಾಗ ವನ್ನು ಬಿಸಿ ಮಾಡಿ ನಂತರ ಒಂದು ಚಮಚ ಬಾಜಿ ಹಾಕಿ ಸ್ಪ್ರೆಡ್ ಮಾಡಿ ಮದ್ಯ ಸೀಳಿದ ಪಾವ್ ಬನ್ ಒಳ ಭಾಗವನ್ನು ಬಿಸಿ ಮಾಡಿ ಬಾಜಿ ಜೊತೆ ಸರ್ವ್ ಮಾಡಿ.

Pav Bhaji

Required ingredients:
Pav bun 6
Carrot 100 grams
Peas 100 grams
Capsicum 100 grams
Potato 100 grams
Onion 2
Tomato 2
Chopped Coriander leaves 1 Cup
Butter ½ Cup 
Salt as per taste
Pav masala 2 Spoon
Red chilly powder 1 Spoon
Cooking oil 2 Spoon
Ginger Garlic paste 1 Spoon
Turmeric powder ½ Spoon
Lemon juice ½ Spoon

Method:
Chop the onions, tomato and Capsicum.
Boiled carrots, potato and peas in a cooker
In a pan add oil and one spoon of butter once it is heated, add onions, tomato capsicum and fry it. Add ginger garlic paste, salt, turmeric powder and cook it until it becomes soft. Add red chilly powder, Pav masala ,boiled vegetables and mix it well .Once it is mixed smash the vegetables. Add little water, keeping the flame in low  allow it cook for 5 minutes. At last add coriander leaves for seasoning along with lemon juice.
In a pan add butter once it is heated, heat the top side of the Pav bun and add Bhaji on the inner side of Pav bun and heat it. Serve it with Bhaji.


You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz