ದೇಸಿ ಮ್ಯಾಕ್ರೋನಿ
ಬೇಕಾಗುವ ಸಾಮಗ್ರಿಗಳು:
ಮ್ಯಾಕ್ರೋನಿ 250 ಗ್ರಾಂ
ಈರುಳ್ಳಿ 2
ಟೊಮೆಟೊ 2
ಕ್ಯಾಪ್ಸಿಕಮ್ 1
ಕೆಂಪು ಮೆಣಸಿನಕಾಯಿ ಪುಡಿ 2ಚಮಚ
ದನಿಯಾ ಪುಡಿ 1ಚಮಚ
ಗರಂ ಮಸಾಲ 1ಚಮಚ
ಅರಿಶಿನ 1/2 ಚಮಚ
ಎಣ್ಣೆ 4-5 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು ಸ್ವಲ್ಪ
ನಿಂಬೆ ರಸ 1ಚಮಚ
ಮಾಡುವ ವಿಧಾನ:
ಕುದಿಯುವ ನೀರಿಗೆ ಉಪ್ಪು ಸ್ವಲ್ಪ, 1/2 ಚಮಚ ಎಣ್ಣೆ ಮತ್ತು ಮ್ಯಾಕ್ರೋನಿಯನ್ನು ಹಾಕಿ 5 ನಿಮಿಷ ಬೇಯಿಸಿ ನಂತರ ನೀರು ಬಸಿಯಿರಿ. ಮತ್ತೆ ತಣ್ಣನೆಯ ನೀರು ಹಾಕಿ ನೀರು ಬಸಿದು ಇಡಿ.
ಈರುಳ್ಳಿ ಟೊಮೆಟೊ ಕೊತ್ತಂಬರಿ ಸೊಪ್ಪು ಕ್ಯಾಪ್ಸಿಕಮ್ ಅನ್ನು ಸಣ್ಣಗೆ ಹೆಚ್ಚಿಡಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಟೊಮೆಟೊ ಕ್ಯಾಪ್ಸಿಕಮ್ ಹಾಕಿ ಬಾಡಿಸಿ ಮೆತ್ತಾಗಾಗುವರೆಗೂ. ನಂತರ ಉಪ್ಪು ಅರಿಶಿಣ ಕೆಂಪು ಮೆಣಸಿನಕಾಯಿ ಪುಡಿ ದನಿಯಾ ಪುಡಿ ಗರಂ ಮಸಾಲ ಹಾಕಿ ಚೆನ್ನಾಗಿ ಬೆರೆಸಿ. ನಂತರ ಮ್ಯಾಕ್ರೋನಿ ಸೇರಿಸಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ 5 ನಿಮಿಷ ಮುಚ್ಚಿಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿದರೆ ರುಚಿಯಾದ ದೇಸಿ ಮ್ಯಾಕ್ರೋನಿ ತಿನ್ನಲು ರೆಡಿ.
ಎಣ್ಣೆ ಕಡಿಮೆ ಆದರೆ ಮ್ಯಾಕ್ರೋನಿ ಉದುರಾಗಿ ಇರಲ್ಲ. ನೋಡಿ ಎಣ್ಣೆ ಹಾಕಿ
Desi Marconi
Required ingredients:
Marconi 250 grams
Onions 2
Tomato 2
Capsicum 1
Red Chilly powder 2 Spoon
Coriander powder 1 Spoon
Garam masala 1 Spoon
Turmeric powder 1/2 Spoon
Oil 4-5 spoon
Salt as required
Coriander leaves
Lemon juice 1 Spoon
Method:
Bring water to boil, add a bit of salt, 1/2 spoon oil and macaroni and let it cook for 5mins. Once it is cooked strain the water and wash it with cold water.
Chop the onions, tomatoes, coriander leaves and capsicum and keep it aside.
In a pan add oil, once it’s heated add onions, tomatoes, capsicum and fry it till it becomes soft. Add salt, turmeric powder, red chilli powder, coriander powder and garam masala and mix it well. Add macaroni and mix. Keep the flame low and close the lid for 5 mins. At last add coriander leaves along with the lemon juice and mix it well.
If oil is less macaroni will be sticky. So add oil as required.