ಬ್ರೌನ್ ರೈಸ್ ಬಿಸಿಬೇಳೆ ಬಾತ್
ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ 1 ಕಪ್
ಬ್ರೌನ್ ರೈಸ್ 1ಕಪ್
ಹುಣಸೆಹಣ್ಣು ನಿಂಬೆ ಗಾತ್ರ
ಮಿಶ್ರ ತರಕಾರಿಗಳು 1ಕಪ್
ಎಣ್ಣೆ 2 ಚಮಚ
ಸಾಸಿವೆ 1/2 ಚಮಚ
ಕರಿಬೇವು ಸ್ವಲ್ಪ
ತೆಂಗಿನ ತುರಿ 1/4 ಕಪ್
ಕೊಬ್ಬರಿ ತುರಿ ಸ್ವಲ್ಪ
ಬಿಸಿಬೇಳೆ-ಬಾತ್ ಪುಡಿ 2-3 ಚಮಚ
ಇಂಗು ಸ್ವಲ್ಪ
ಒಣಮೆಣಸಿನಕಾಯಿ 3
ಮಾಡುವ ವಿಧಾನ:
ಬ್ರೌನ್ ರೈಸ್ ಅನ್ನು 5 ಗಂಟೆ ಗಳ ಕಾಲ ನೀರಿನಲ್ಲಿ ನೆನಸಿ. ನಂತರ ಕುಕ್ಕರ್ ನಲ್ಲಿ 6-7 ಬಾರಿ ಕೂಗಿಸಿ.
ಒಂದು ಕಪ್ ರೈಸ್ ಗೆ 3ಕಪ್ ನೀರು ಸೇರಿಸಿ.
ಬಿಸಿಬೇಳೆ ಬಾತ್ ಪುಡಿ, ತೆಂಗಿನ ತುರಿ ಮತ್ತು ಹುಣಸೆಹಣ್ಣು ಸೇರಿಸಿ ರುಬ್ಬಿಕೊಳ್ಳಿ.
ತೊಗರಿಬೇಳೆ ಯನ್ನು ಅರಿಶಿನ ಸೇರಿಸಿ ಬೇಯಿಸಿ ಕೊಳ್ಳಿ.
ಕುಕ್ಕರ್ ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಇಂಗು, ಕರಿಬೇವು, ಒಣಮೆಣಸಿನ ಕಾಯಿ ತರಕಾರಿಗಳನ್ನು ಸೇರಿಸಿ ಬಾಡಿಸಿ. ನಂತರ ಇದಕ್ಕೆ ಬೇಯಿಸಿದ ಬ್ರೌನ್ ರೈಸ್ ಉಪ್ಪು ರುಬ್ಬಿದ ಮಿಶ್ರಣ ಸೇರಿಸಿ ಕುದಿಯಲು ಬಿಡಿ. ಕುದಿ ಬಂದಮೇಲೆ ಬೇಯಿಸಿದ ತೊಗರಿಬೇಳೆ ಕೊಬ್ಬರಿ ತುರಿ ಸೇರಿಸಿ 2ವಿಷಲ್ ಕೂಗಿಸಿ. ಕುಕ್ಕರ್ ತಣ್ಣಾಗಾದ ಮೇಲೆ ತೆಗೆದು ಕೊತ್ತಂಬರಿ ಸೊಪ್ಪು ಮತ್ತು ತುಪ್ಪ ಸೇರಿಸಿ ಬಡಿಸಿ.
ಇದು ಸ್ವಲ್ಪ ತೆಳುವಾಗಿ ಇರಬೇಕು. ತಣ್ಣಾಗಾದ ನಂತರ ಗಟ್ಟಿಯಾಗುತ್ತದೆ.
ಬಿಸಿಬೇಳೆ ಬಾತ್ ಪುಡಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿhttps://lifeonplates.com/2019/03/06/bisi-bele-bath-powder-recipe-in-kannada/