ಉಪ್ಸಾರು | Upsaaru recipe in Kannada and English

By

ಉಪ್ಸಾರು

ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ 1ಕಪ್
ಸಬ್ಸಿಗೆ ಸೊಪ್ಪು 2ಕಟ್ಟು ದಪ್ಪದ್ದು
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಸೊಪ್ಪುನ್ನು ಸ್ವಚ್ಛ ಮಾಡಿ ತೊಳೆದು ಹೆಚ್ಚಿಡಿ.
ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಿ ಕುದಿ ಬಂದಮೇಲೆ ತೊಗರಿಬೇಳೆ ಹಾಕಿ ಬೇಯಲು ಬಿಡಿ. ಅರ್ಧ ಬೆಂದ ಬೇಳೆಗೆ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಿಸಿ. ನಂತರ ಸೊಪ್ಪು ಬೇಳೆಯನ್ನು ಬಸಿದು ನೀರನ್ನು ತೆಗೆದಿಡಿ. ಸೊಪ್ಪಿನ ಪಲ್ಯ ಮಾಡಿ.

ಸೊಪ್ಪಿನ ಪಲ್ಯ

ಬೇಕಾಗುವ ಸಾಮಗ್ರಿಗಳು:
ಸಾಸಿವೆ
ಒಣಮೆಣಸಿನಕಾಯಿ
ಬೇಯಿಸಿದ ಬೇಳೆ ಮತ್ತು ಸೊಪ್ಪು
ಕರಿಬೇವು
ಬೆಳ್ಳುಳ್ಳಿ
ತೆಂಗಿನ ತುರಿ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ನಂತರ ಜಜ್ಜಿದ್ದ ಬೆಳ್ಳುಳ್ಳಿ ಮತ್ತು ಒಣಮೆಣಸಿನಕಾಯಿ ಕರಿಬೇವು ಹಾಕಿ ಫ್ರೈ ಮಾಡಿ ಬೇಯಿಸಿದ ಬೇಳೆ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ ಕೊನೆಯದಾಗಿ ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಕೈಯಾಡಿಸಿದರೆ ರುಚಿಯಾದ ಪಲ್ಯ ರೆಡಿ.

ಉಪ್ಸಾರು ಖಾರ

ಖಾರಕ್ಕೆ ಬೇಕಾಗುವ ಸಾಮಗ್ರಿಗಳು:
ಒಣಮೆಣಸಿನಕಾಯಿ 7-8
ಜೀರಿಗೆ 1ಚಮಚ
ಕಾಳು ಮೆಣಸು 1/2 ಚಮಚ
ಹುಣಸೆಹಣ್ಣು ಸ್ವಲ್ಪ
ಉಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ 10 ಎಸಳು

ಮಾಡುವ ವಿಧಾನ:
ಒಣಮೆಣಸಿನಕಾಯಿ ಯನ್ನು ಸಣ್ಣ ಉರಿಯಲ್ಲಿ ಕೆಂಪಗೆ ಉರಿದುಕೊಳ್ಳಿ. ನಂತರ ಒಣಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಮೆಣಸು, ಉಪ್ಪು, ಸ್ವಲ್ಪ ಹುಣಸೆ ಹಣ್ಣು ಮತ್ತು ಬೇಯಿಸಿದ ಬೇಳೆ ಸ್ವಲ್ಪ ಸೇರಿಸಿ ರುಬ್ಬಿಕೊಳ್ಳಿ. ಗಟ್ಟಿಯಾಗಿ ಇರಬೇಕು ನೀರು ಬೇಕೆನಿಸಿದರೆ ಬೇಳೆ ಬೇಯಿಸಿದ ನೀರನ್ನು ಬಳಸಿ.

Uppsaru

Required ingredients :
Toor Dal 1 cup
Dil leaves 2 bunches
Salt as required

Method:
Clean and cut the dil leaves. Take water in a vessel and let it boil. Once it starts to boil add toor dal and let it cook. After half cooked add Dil leaves and salt as required and let it cook completely. Once it is cooked separate dil leaves from water and do dil leaves palya.

Dil Leaves Palya

Required ingredients :
Mustard
Garlic
Red Chilly
Curry Leaves
Boiled Toor Dal and Dil Leaves
Grated Coconut
Coriander Leaves

Method:
To a pan add oil. Once it is heated add mustard, when it begins to pop add crushed garlic, red chilly, curry leaves and fry it. Then add toor dal and dil leaves, mix it well. Finally, add grated coconut, coriander leaves, mix it and it is done.

Uppsaru Khara

Required ingredients :
Red chilies 7-8 pieces
Cumin 1 spoon
Peppercorns 1/2 spoon
Tamarind as required
Salt as required
Coriander leaves
Garlic 10 pieces

Method:
In a pan roast the red chilies. Then in a mixer add roasted red chili, garlic, coriander leaves, cumin seeds, peppercorns, salt as required, tamarind, boiled toor dal and grind it to a smooth paste. It should be a thick paste. If required add boiled toor dal water.

ಅವರೆ ಕಾಳು ಉಪ್ಸಾರು ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ https://lifeonplates.com/2019/01/07/avarekalu-upsaaru-recipe-in-kannada/

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz