ಕ್ಯಾರೆಟ್ ಚಿತ್ರಾನ್ನ | Carrot Chitranna recipe in Kannada

By

ಕ್ಯಾರೆಟ್ ಚಿತ್ರಾನ್ನ

ಬೇಕಾಗುವ ಸಾಮಗ್ರಿಗಳು:
ಉದುರಾದ ಅನ್ನ 1ಕಪ್
ಕ್ಯಾರೆಟ್ 2 ತುರಿದಿದ್ದದ್ದು
ನಿಂಬೆ ಹಣ್ಣು 1
ಕೊತ್ತಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಷ್ಟು
ಹಸಿಮೆಣಸಿನಕಾಯಿ 10 ಹೆಚ್ಚಿದ್ದು
ಅರಿಶಿನ ಸ್ವಲ್ಪ
ಕರಿಬೇವು ಸ್ವಲ್ಪ
ಕಡ್ಲೆಕಾಯಿ ಬೀಜ 2ಚಮಚ
ಕಡ್ಲೆಬೇಳೆ 1ಚಮಚ
ಉದ್ದಿನಬೇಳೆ 1ಚಮಚ
ಎಣ್ಣೆ 3-4 ಚಮಚ
ಸಾಸಿವೆ 1/4 ಚಮಚ
ಕಾಯಿತುರಿ 2ಚಮಚ

ಮಾಡುವ ವಿಧಾನ:
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ನಂತರ ಕಡ್ಲೆಬೇಳೆ, ಉದ್ದಿನಬೇಳೆ, ಕಡ್ಲೆಕಾಯಿ ಬೀಜ ಹಾಕಿ ಕೆಂಪಗೆ ಹುರಿದುಕೊಳ್ಳಿ ಈಗ ಅರಿಶಿನ, ಕರಿಬೇವು, ಹಸಿಮೆಣಸಿನಕಾಯಿ, ಕ್ಯಾರೆಟ್ ತುರಿ, ಉಪ್ಪು ಸೇರಿಸಿ ಕೈಯಾಡಿಸಿ. ಕ್ಯಾರೆಟ್ ಮೆತ್ತಾಗಾದ ನಂತರ ಒಲೆ ಆರಿಸಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು, ಕಾಯಿ ತುರಿ ಮತ್ತು ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿದರೆ ಗೊಜ್ಜು ರೆಡಿ.

ಉದುರಾದ ಅನ್ನಕ್ಕೆ ಕಲಿಸಿದರೆ ರುಚಿಯಾದ ಚಿತ್ರಾನ್ನ ರೆಡಿ.

 

IMG_2184

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz