ಪನ್ನೀರ್ ಪರಾಟ
ಬೇಕಾಗುವ ಸಾಮಗ್ರಿಗಳು:
ಚಪಾತಿ ಹಿಟ್ಟು 1 ಕಪ್ (ಕಲಿಸಿದ್ದು )
ಪನ್ನೀರು 200 ಗ್ರಾಂ
ಹಸಿಮೆಣಸಿನಕಾಯಿ 2
ಈರುಳ್ಳಿ 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ಚಿಲ್ಲಿ ಪೌಡರ್ 1ಚಮಚ
ದನಿಯಾ ಪುಡಿ 1ಚಮಚ
ಗರಂ ಮಸಾಲ 1ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಅಮ್ಚೂರ್ ಪುಡಿ 1/2 ಚಮಚ
ಎಣ್ಣೆ 4ಚಮಚ
ಮಾಡುವ ವಿಧಾನ:
ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಪನ್ನೀರುನ್ನು ತುರಿದುಕೊಳ್ಳಿ.
ಒಂದು ಪಾತ್ರೆಯಲ್ಲಿ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ತುರಿದ ಪನ್ನೀರು, ದನಿಯಾ ಪುಡಿ, ಚಿಲ್ಲಿ ಪುಡಿ, ಗರಂ ಮಸಾಲ ಪುಡಿ, ಅಮ್ಚೂರ್ ಪುಡಿ,ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಎಲ್ಲಾ ಸೇರಿಸಿ ಮಿಕ್ಸ್ ಮಾಡಿದರೆ ಹೂರಣ ರೆಡಿ.
ಚಪಾತಿ ಲಟ್ಟಿಸಿ ಮದ್ಯ ಪನ್ನೀರು ಮಿಶ್ರಣ ಇಷ್ಟು ಹೋಳಿಗೆ ತರಹ ಮುಚ್ಚಿ ನಿಧಾನವಾಗಿ ಲಟ್ಟಿಸಿ ಕಾದ ತವಾ ಮೇಲೆ ಎಣ್ಣೆ ಹಾಕಿ ಎರಡು ಕಡೆ ಹದವಾಗಿ ಬೇಯಿಸಿದರೆ ರುಚಿಯಾದ ಪನ್ನೀರು ಪರಾಟ ತಿನ್ನಲು ರೆಡಿ. ಮೊಸರು, ಉಪ್ಪಿನಕಾಯಿ ಅಥವಾ ಪುದೀನ ಚಟ್ನಿಯೊಂದಿಗೆ ಬಡಿಸಿ.