ಹೀರೆಕಾಯಿ ದೋಸೆ
ಬೇಕಾಗುವ ಸಾಮಗ್ರಿಗಳು:
ಅಕ್ಕಿ 2ಕಪ್
ಎಳೆ ಹೀರೆಕಾಯಿ 1/4 ಕೆಜಿ
ಒಣಮೆಣಸಿನಕಾಯಿ 6-8
ಹುಣಸೆಹಣ್ಣು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 5-6 ಚಮಚ
ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು 2 ಗಂಟೆ ನೆನಸಿಡಿ. ನಂತರ ಉಪ್ಪು, ಒಣಮೆಣಸಿನಕಾಯಿ, ಹುಣಸೆಹಣ್ಣು ಅಗತ್ಯ ಇದ್ದಷ್ಟು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ.
ಹೀರೆಕಾಯಿ ಸಿಪ್ಪೆ ತೆಗೆದು ತೊಳೆದು ತೆಳುವಾದ ಬಿಲ್ಲೆಯಾಗಿ ಹೆಚ್ಚಿಕೊಳ್ಳಿ.
ಕಾದ ತವಾ ಮೇಲೆ ಹೆಚ್ಚಿದ ಹೀರೆಕಾಯಿ ಯನ್ನು ದೋಸೆ ಹಿಟ್ಟಿನಲ್ಲಿ ಹದ್ದಿ ತವಾ ಮೇಲೆ ದೋಸೆ ಆಕಾರಕ್ಕೆ ಹಾಕಿ ಎಣ್ಣೆ ಹಾಕಿ ಎರಡು ಕಡೆ ಬೇಯಿಸಿದರೆ ಬಿಸಿಯಾದ ರುಚಿಯಾದ ಹೀರೆಕಾಯಿ ದೋಸೆ ತಿನ್ನಲು ರೆಡಿ. ಇದನ್ನು ಕಾಯಿಚಟ್ನಿ ಮೊಸರಿನೊಂದಿಗೆ ಬಡಿಸಿ.
ಚಟ್ನಿ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ https://lifeonplates.com/2019/04/28/coconut-chutney-recipe-in-kannada/