ಗೊಜ್ಜು ಅವಲಕ್ಕಿ | Gojju Avalakki recipe in Kannada

By

ಗೊಜ್ಜು ಅವಲಕ್ಕಿ

ಬೇಕಾಗುವ ಸಾಮಗ್ರಿಗಳು:
ಗಟ್ಟಿಯಾದ ಅವಲಕ್ಕಿ 2ಕಪ್
ತಿಳಿಸಾರಿನ ಪುಡಿ 2ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಬೆಲ್ಲ ಸ್ವಲ್ಪ
ಹುಣಸೆ ರಸ 1/4 ಕಪ್
ಕೊಬ್ಬರಿ ತುರಿ 2ಚಮಚ

ಒಗ್ಗರಣೆಗೆ:
ಎಣ್ಣೆ 2ಚಮಚ
ಸಾಸಿವೆ 1/2 ಚಮಚ
ಕಡ್ಲೆಬೇಳೆ 1ಚಮಚ
ಉದ್ದಿನಬೇಳೆ 1ಚಮಚ
ಕಡ್ಲೆಕಾಯಿ ಬೀಜ 2ಚಮಚ
ಕರಿಬೇವು ಸ್ವಲ್ಪ
ಒಣಮೆಣಸಿನಕಾಯಿ 4

ಮಾಡುವ ವಿಧಾನ:
ಅವಲಕ್ಕಿ ಶುಚಿ ಮಾಡಿ ಮಿಕ್ಸಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ ಅಥವಾ ಹೊರಳಿನಲ್ಲಿ ಕುಟ್ಟಿಕೊಳ್ಳಿ. ನಂತರ ತೊಳೆದು ನೀರು ಬಸಿದಿಡಿ.

ಒಂದು ಪಾತ್ರೆಗೆ ಹುಣಸೆ ರಸ ಉಪ್ಪು ಬೆಲ್ಲ ತಿಳಿಸಾರಿನ ಪುಡಿ ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ ಇದಕ್ಕೆ ತೊಳೆದಿಟ್ಟ ಅವಲಕ್ಕಿ ಸೇರಿಸಿ ನೆನೆಯಲು ಬಿಡಿ.

ಒಂದು ಬಾಣಲೆಯಲ್ಲಿ ಒಗ್ಗರಣೆ ಮಾಡಿ ನೆನಸಿದ ಅವಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕಡಿಮೆ ಉರಿಯಲ್ಲಿ ಐದು ನಿಮಿಷ ಮುಚ್ಚಿಡಿ. ಕೊನೆಯದಾಗಿ ಕೊಬ್ಬರಿ ತುರಿ ಸೇರಿಸಿದರೆ ರುಚಿಯಾದ ಗೊಜ್ಜು ಅವಲಕ್ಕಿ ರೆಡಿ.

ತಿಳಿಸಾರಿನ ಪುಡಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗೊಜ್ಜು ಅವಲಕ್ಕಿ|Gojju Avalakki

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz