ಈರುಳ್ಳಿ ದೋಸೆ
ಬೇಕಾಗುವ ಸಾಮಗ್ರಿಗಳು:
ಅಕ್ಕಿ 3 ಕಪ್
ಉದ್ದಿನಬೇಳೆ 1 ಕಪ್
ಮೆಂತ್ಯ 1ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಈರುಳ್ಳಿ ಹೆಚ್ಚಿದ್ದು 2ಕಪ್
ಕೊತ್ತಂಬರಿ ಸೊಪ್ಪು ಹೆಚ್ಚಿದ್ದು
ಜೀರಿಗೆ 1ಚಮಚ
ತುಪ್ಪ /ಎಣ್ಣೆ
ಅಕ್ಕಿ ಮತ್ತು ಬೇಳೆಗಳನ್ನು ಬೇರೆ ಬೇರೆಯಾಗಿ 4 – 5 ಗಂಟೆ ನೆನಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ 8 ಗಂಟೆಗಳ ಕಾಲ ಹುದುಗಲು ಬಿಡಿ.
ಬೆಳಗ್ಗೆ ಉಪ್ಪು ಸೇರಿಸಿ ಕಲಸಿ ಕೊಳ್ಳಿ. ನಂತರ ಕಾದ ತವಾ ಮೇಲೆ ಸೌಟಿನಿಂದ ದೋಸೆ ಹಾಕಿ ಮೇಲೆ ಈರುಳ್ಳಿ ಕೊತ್ತಂಬರಿ ಸೊಪ್ಪು ಜೀರಿಗೆ ತುಪ್ಪ ಹಾಕಿ ಎರಡು ಕಡೆ ಬೇಯಿಸಿದರೆ ಬಿಸಿ ಬಿಸಿಯಾದ ಈರುಳ್ಳಿ ದೋಸೆ ಸವಿಯಲು ರೆಡಿ.
ಮಾವಿನಕಾಯಿ ಚಟ್ನಿ
ಬೇಕಾಗುವ ಸಾಮಗ್ರಿಗಳು:
ಮಾವಿನಕಾಯಿ ತುರಿ 1ಕಪ್
ತೆಂಗಿನ ತುರಿ 1ಕಪ್
ಹಸಿಮೆಣಸಿನಕಾಯಿ 7
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಹುರಿಗಡ್ಲೆ 2ಚಮಚ
ಬೆಳ್ಳುಳ್ಳಿ 5ಎಸಳು
ಒಗ್ಗರಣೆಗೆ:
ಎಣ್ಣೆ 2ಚಮಚ
ಸಾಸಿವೆ 1/4 ಚಮಚ
ಕರಿಬೇವು ಸ್ವಲ್ಪ
ಒಣಮೆಣಸಿನಕಾಯಿ 2
ಇಂಗು ಸ್ವಲ್ಪ
ಮಾಡುವ ವಿಧಾನ:
ಚಟ್ನಿಗೆ ಬೇಕಾಗಿರುವ ಎಲ್ಲಾ ಸಾಮಗ್ರಿಗಳನ್ನು ನುಣ್ಣಗೆ ರುಬ್ಬಿಕೊಳ್ಳಿ ನಂತರ ಒಗ್ಗರಣೆ ಮಾಡಿ.