ಆಲೂಗೆಡ್ಡೆ ಪಲ್ಯ
ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ 1/2 ಕೆಜಿ
ಬ್ಯಾಡಗಿ ಮೆಣಸಿನಕಾಯಿ 15
ಬೆಳ್ಳುಳ್ಳಿ 20 ಎಸಳು
ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 2ಚಮಚ
ಸಾಸಿವೆ 1/2 ಚಮಚ
ಕರಿಬೇವು ಸ್ವಲ್ಪ
ಒಣಮೆಣಸಿನಕಾಯಿ 2
ಕಡ್ಲೆಬೇಳೆ 1ಚಮಚ
ಮಾಡುವ ವಿಧಾನ:
ಆಲೂಗೆಡ್ಡೆ ಯನ್ನು ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಕೊಳ್ಳಿ. ಬ್ಯಾಡಗಿ ಮೆಣಸಿನಕಾಯಿಯನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನಸಿ ತೆಗೆದು ಬೆಳ್ಳುಳ್ಳಿ ಮತ್ತು ಹುಣಸೆಹಣ್ಣು ಸೇರಿಸಿ ರುಬ್ಬಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಕಡ್ಲೆಬೇಳೆ ಕರಿಬೇವು ಒಣಮೆಣಸಿನ ಕಾಯಿಯನ್ನು ಹಾಕಿ ಫ್ರೈ ಮಾಡಿ ನಂತರ ರುಬ್ಬಿಕೊಂಡ ಮಿಶ್ರಣ ಸೇರಿಸಿ ಹಸಿವಾಸನೆ ಹೋಗುವರೆಗೂ ಹುರಿಯಿರಿ ನಂತರ ಬೇಯಿಸಿದ ಪುಡಿ ಮಾಡಿದ ಆಲೂಗಡ್ಡೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಐದು ನಿಮಿಷ ಮುಚ್ಚಿಡಿ ನಂತರ ಚಪಾತಿ ಅಥವಾ ದೋಸೆಯೊಂದಿಗೆ ಬಡಿಸಿ.