ಕ್ಯಾಪ್ಸಿಕಮ್ ಚಿತ್ರಾನ್ನ
ಬೇಕಾಗುವ ಸಾಮಗ್ರಿಗಳು:
ಕ್ಯಾಪ್ಸಿಕಮ್ 1/2 ಕೆಜಿ
ಈರುಳ್ಳಿ 2
ಹಸಿಮೆಣಸಿನಕಾಯಿ 12
ಒಣಮೆಣಸಿನ ಕಾಯಿ 2
ಕರಿಬೇವು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ನಿಂಬೆಹಣ್ಣು 1
ಕಡ್ಲೆಬೇಳೆ 1ಚಮಚ
ಕಡ್ಲೆಕಾಯಿ 2ಚಮಚ
ಅರಿಶಿನ ಸ್ವಲ್ಪ
ಎಣ್ಣೆ 3ಚಮಚ
ಸಾಸಿವೆ 1/2 ಚಮಚ
ಉದುರಾದ ಅನ್ನ 2 ಕಪ್
ಮಾಡುವ ವಿಧಾನ:
ಈರುಳ್ಳಿ ಕ್ಯಾಪ್ಸಿಕಮ್ ಮತ್ತು ಹಸಿಮೆಣಸಿನಕಾಯಿಯನ್ನು ಹೆಚ್ಚಿಕೊಳ್ಳಿ.
ಕಡ್ಲೆಕಾಯಿ ಹಾಗೂ ಕಡ್ಲೆಬೇಳೆ ಯನ್ನು ಎಣ್ಣೆಯಲ್ಲಿ ಕೆಂಪಗೆ ಹುರಿದು ತೆಗೆದಿಡಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಈರುಳ್ಳಿ ಕರಿಬೇವು ಹಸಿಮೆಣಸಿನಕಾಯಿ ಒಣಮೆಣಸಿನಕಾಯಿ ಹಾಕಿ ಫ್ರೈ ಮಾಡಿ ನಂತರ ಕ್ಯಾಪ್ಸಿಕಮ್ ಉಪ್ಪು ಅರಿಶಿನ ಸೇರಿಸಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಕೊನೆಯದಾಗಿ ನಿಂಬೆ ರಸ, ಎಣ್ಣೆಯಲ್ಲಿ ಹುರಿದ ಕಡ್ಲೆಕಾಯಿ ಮತ್ತು ಕಡ್ಲೆಬೇಳೆ ಸೇರಿಸಿ ಮಿಕ್ಸ್ ಮಾಡಿ ಅನ್ನಕ್ಕೆ ಕಲಸಿದರೆ ರುಚಿಯಾದ ಕ್ಯಾಪ್ಸಿಕಮ್ ಚಿತ್ರಾನ್ನ ರೆಡಿ.