ಈರುಳ್ಳಿ ಪಕೋಡ
ಬೇಕಾಗುವ ಸಾಮಗ್ರಿಗಳು:
ಈರುಳ್ಳಿ 3
ಹಸಿಮೆಣಸಿನಕಾಯಿ 5-6
ಉಪ್ಪು ರುಚಿಗೆ ತಕ್ಕಷ್ಟು
ಅರಿಶಿನ ಸ್ವಲ್ಪ
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಎಣ್ಣೆ ಕರಿಯಲು
ಕಡ್ಲೆಹಿಟ್ಟು 1/2 ಕಪ್
ಚಿರೋಟಿ ರವೆ 2ಚಮಚ
ಮಾಡುವ ವಿಧಾನ:
ಈರುಳ್ಳಿ ಯನ್ನು ಉದ್ದುದ್ದ ಹೆಚ್ಚಿಕೊಳ್ಳಿ.
ಕರಿಬೇವು, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಒಂದು ಪಾತ್ರೆಗೆ ಹೆಚ್ಚಿದ ಈರುಳ್ಳಿ ಕರಿಬೇವು ಹಸಿಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಉಪ್ಪು ಅರಿಶಿನ ಹಾಕಿ ಮಿಕ್ಸ್ ಮಾಡಿ ನಂತರ ಚಿರೋಟಿ ರವೆ ಕಡ್ಲೆಹಿಟ್ಟು ಹಾಕಿ ಕಲಸಿ. ಸ್ವಲ್ಪ ಸ್ವಲ್ಪವೆ ನೀರು ಸೇರಿಸಿ ಹದವಾಗಿ ಕಲಸಿ. ಈ ಮಿಶ್ರಣ ಸ್ವಲ್ಪ ಗಟ್ಟಿಯಾಗಿ ಇರಬೇಕು. ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಉರಿ ಕಡಿಮೆ ಮಾಡಿ ಕಡ್ಲೆಹಿಟ್ಟಿನ ಮಿಶ್ರಣವನ್ನು ಉದುರಿಸಿ ಗರಿ ಗರಿಯಾಗಿ ಬೇಯಿಸಿದರೆ ಈರುಳ್ಳಿ ಪಕೋಡ ತಿನ್ನಲು ರೆಡಿ.
ಬೇರೆ ಬೇರೆ ತರಕಾರಿ ಮತ್ತು ಸೊಪ್ಪು ಗಳನ್ನು ಬಳಸಿ ಮಾಡಬಹುದು. ನಿಮಗಿಷ್ಟವಾದ ತರಕಾರಿ ಬಳಸಿ ರುಚಿ ರುಚಿಯಾದ ಪಕೋಡ ಮಾಡಿಕೊಳ್ಳಿ.