ಶೇಂಗಾ ಚಟ್ನಿ ಪುಡಿ
ಬೇಕಾಗುವ ಸಾಮಗ್ರಿಗಳು:
ಶೇಂಗಾ /ಕಡ್ಲೆಕಾಯಿ 1ಕಪ್
ಬ್ಯಾಡಗಿ ಮೆಣಸಿನಕಾಯಿ 25
ಬೆಳ್ಳುಳ್ಳಿ 15 ಎಸಳು
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಕಡ್ಲೆಕಾಯಿ ಯನ್ನು ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಹುರಿದುಕೊಳ್ಳಿ.
ಮೆಣಸಿನಕಾಯಿಯನ್ನು ಸ್ವಲ್ಪ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ.
ತಣ್ಣಾಗಾದ ನಂತರ ಉಪ್ಪು ಬೆಳ್ಳುಳ್ಳಿ ಸೇರಿಸಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ.
ಇದನ್ನು ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಚಟ್ನಿ ಪುಡಿ ಸೇರಿಸಿ ಕಲಸಿ ತಿನ್ನಬಹುದು.
ಇಡ್ಲಿ, ದೋಸೆ, ಚಪಾತಿ, ರೊಟ್ಟಿ ಯಾವುದಕಾದರೂ ಸರಿ ಜೊತೆಯಾಗುತ್ತೆ. ಇದಕ್ಕೆ ಸ್ವಲ್ಪ ತುಪ್ಪ ಹಾಕಿ ಮಿಕ್ಸ್ ಮಾಡಿ ಉಪಯೋಗಿಸಬಹುದು. ಮೊಸರು ಸೇರಿಸಿ ಕಲಸಿ ಉಪಯೋಗಿಸಬಹುದು.