ಕ್ಯಾರೆಟ್ ಮಿಲ್ಕ್ ಶೇಕ್
ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್ 1/2 ಕೆಜಿ
ಹಾಲು 1/2 ಲೀಟರ್
ಸಕ್ಕರೆ 1-2 ಚಮಚ
ಗೋಡಂಬಿ 1/2 ಕಪ್
ಮಾಡುವ ವಿಧಾನ:
ಕ್ಯಾರೆಟ್ ತೊಳೆದು ಹೆಚ್ಚಿಕೊಳ್ಳಿ. ಸ್ವಲ್ಪ ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ ಕೊಳ್ಳಿ. ತಣ್ಣಾಗಾಗಲು ಬಿಡಿ.
ಮೊದಲು ಮಿಕ್ಸಿಗೆ ಗೋಡಂಬಿಯನ್ನು ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಬೇಯಿಸಿದ ಕ್ಯಾರೆಟ್ ಮತ್ತು ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ ಈಗ ಹಾಲು ಸೇರಿಸಿ ಮಿಕ್ಸ್ ಮಾಡಿ ಫ್ರಿಡ್ಜ್ ನಲ್ಲಿಡಿ. ಅರ್ಧ ಗಂಟೆ ನಂತರ ತಣ್ಣನೆಯ ಕ್ಯಾರೆಟ್ ಮಿಲ್ಕ್ ಶೇಕ್ ಕುಡಿಯಲು ರೆಡಿ.
ಮಿಲ್ಕ್ ಶೇಕ್ ರೆಡಿ ಮಾಡಿ ಫ್ರಿಡ್ಜ್ ನಲ್ಲಿ ಇಡುವ ಬದಲು, ಫ್ರಿಡ್ಜ್ ನಲ್ಲಿ ಇಟ್ಟ ಹಾಲನ್ನು ಉಪಯೋಗಿಸಿ ಮಾಡಿದರೂ ಮಿಲ್ಕ್ ಶೇಕ್ ತಣ್ಣಗೆ ಇರುತ್ತೆ.
ಕ್ಯಾರೆಟ್ ನಲ್ಲಿ ಸಿಹಿ ಅಂಶ ಇರುವುದರಿಂದ ಸಕ್ಕರೆ ನೋಡಿ ಹಾಕಿ ಕೊಳ್ಳಿ.