ಕ್ಯಾಪ್ಸಿಕಮ್ ರೈಸ್ | Capsicum Rice recipe in Kannada

By

ಕ್ಯಾಪ್ಸಿಕಮ್ ರೈಸ್

ಬೇಕಾಗುವ ಸಾಮಗ್ರಿಗಳು:
ಕ್ಯಾಪ್ಸಿಕಮ್ 1/2 ಕೆಜಿ
ಟೊಮೆಟೊ 3
ಈರುಳ್ಳಿ 2
ಹಸಿಮೆಣಸಿನಕಾಯಿ 3
ಕೊತ್ತಂಬರಿ ಸೊಪ್ಪು ಸ್ವಲ್ಪ
ಎಣ್ಣೆ 3-4 ಚಮಚ
ಸಾಸಿವೆ 1/2 ಚಮಚ
ಕರಿಬೇವು ಸ್ವಲ್ಪ
ಕಡ್ಲೆಬೇಳೆ 1ಚಮಚ
ಉದ್ದಿನಬೇಳೆ 1ಚಮಚ
ಅರಿಶಿನ ಸ್ವಲ್ಪ
ದನಿಯಾ ಪುಡಿ 1ಚಮಚ
ಮೆಣಸಿನಕಾಯಿ ಪುಡಿ 2ಚಮಚ
ಗರಂ ಮಸಾಲ 1ಚಮಚ
ಉದುರಾದ ಅನ್ನ 3ಕಪ್
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಕ್ಯಾಪ್ಸಿಕಮ್, ಈರುಳ್ಳಿ, ಟೊಮೆಟೊ ಹೆಚ್ಚಿಕೊಳ್ಳಿ. ಹಸಿಮೆಣಸಿನಕಾಯಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಕಡ್ಲೆಬೇಳೆ, ಉದ್ದಿನಬೇಳೆ, ಕರಿಬೇವು ಹಾಕಿ ಫ್ರೈ ಮಾಡಿ ನಂತರ ಈರುಳ್ಳಿ ಹಾಕಿ ಮೆತ್ತಾಗಾಗುವರೆಗೂ ಹುರಿಯಿರಿ. ಈಗ ಟೊಮೆಟೊ ಹಸಿಮೆಣಸಿನಕಾಯಿ ಮತ್ತು ಕ್ಯಾಪ್ಸಿಕಮ್ ಅರಿಶಿನ ಉಪ್ಪು ಸೇರಿಸಿ ಬೇಯಲು ಬಿಡಿ. ಈಗ ದನಿಯಾ ಪುಡಿ ಮೆಣಸಿನಕಾಯಿ ಪುಡಿ ಮತ್ತು ಗರಂ ಮಸಾಲ ಪುಡಿ ಹಾಕಿ ಕೈಯಾಡಿಸಿ ಅನ್ನ ಸೇರಿಸಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ 5 ನಿಮಿಷ ಮುಚ್ಚಿಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಕ್ಯಾಪ್ಸಿಕಮ್ ರೈಸ್ ತಿನ್ನಲು ರೆಡಿ.

ಕ್ಯಾಪ್ಸಿಕಮ್ ರೈಸ್ | Capsicum Rice

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz