ಕಡ್ಲೆಕಾಳು ಸಾರು
ಬೇಕಾಗುವ ಸಾಮಗ್ರಿಗಳು:
ಕಡ್ಲೆಕಾಳು 2ಕಪ್
ಆಲೂಗಡ್ಡೆ 3
ಟೊಮೆಟೊ 2
ಈರುಳ್ಳಿ 1
ಬೆಳ್ಳುಳ್ಳಿ 15 ಎಸಳು
ಶುಂಠಿ 1″
ಚಕ್ಕೆ 1″
ಲವಂಗ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಸಾರಿನ ಪುಡಿ 2ಚಮಚ
ತೆಂಗಿನ ತುರಿ 1/2ಕಪ್
ಹುರಿಗಡ್ಲೆ 1ಚಮಚ
ಕಾಳು ಮೆಣಸು 1/2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 2ಚಮಚ
ಗೌಡರು ಶೈಲಿ ಸಾರಿನ ಪುಡಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಾಡುವ ವಿಧಾನ:
ಕಡ್ಲೆಕಾಳನ್ನು 8ಗಂಟೆ ನೆನಸಿಡಿ. ಆಲೂಗೆಡ್ಡೆ ಯನ್ನು ಹೆಚ್ಚಿಕೊಳ್ಳಿ. ಟೊಮೆಟೊ ಮತ್ತು ಸಾರಿನ ಪುಡಿ ಸೇರಿಸಿ ರುಬ್ಬಿಕೊಳ್ಳಿ. ಈರುಳ್ಳಿ ಬೆಳ್ಳುಳ್ಳಿ ಅರಿಶಿನ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ತೆಂಗಿನ ತುರಿ, ಚಕ್ಕೆ ಲವಂಗ ಶುಂಠಿ ಕೊತ್ತಂಬರಿ ಸೊಪ್ಪು ಹುರಿಗಡ್ಲೆ ಮೆಣಸು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಕುಕ್ಕರ್ ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ. ನಂತರ ಕಡ್ಲೆಕಾಳು ಸೇರಿಸಿ ಮಿಕ್ಸ್ ಮಾಡಿ ಹುರಿಯಿರಿ. ಈಗ ಇದಕ್ಕೆ ಟೊಮೆಟೊ ಮತ್ತು ಸಾರಿನ ಪುಡಿ ಮಿಶ್ರಣ ಮತ್ತು ನೀರು ಸೇರಿಸಿ ಹಸಿವಾಸನೆ ಹೋಗುವರೆಗೂ ಕುದಿಸಿ. ನಂತರ ರುಬ್ಬಿದ ತೆಂಗಿನ ಮಿಶ್ರಣ ಉಪ್ಪು ಮತ್ತು ಆಲೂಗಡ್ಡೆ ಸೇರಿಸಿ ಅಗತ್ಯ ಇದ್ದರೆ ಸ್ವಲ್ಪ ನೀರು ಹಾಕಿ ಮುಚ್ಚಲ ಮುಚ್ಚಿ ಒಂದು ಕೂಗಿಸಿದರೆ ರುಚಿಯಾದ ಕಡ್ಲೆಕಾಳು ಸಾರು ರೆಡಿ.
ಇದು ದೋಸೆ ಚಪಾತಿ ರೊಟ್ಟಿ ಮುದ್ದೆ ಅನ್ನ ಯಾವುದಕಾದರೂ ಸರಿ ಜೊತೆಯಾಗುತ್ತೆ.