ಬೆಂಡೆಕಾಯಿ ಕರ್ರಿ
ಬೇಕಾಗುವ ಸಾಮಗ್ರಿಗಳು:
ಬೆಂಡೆಕಾಯಿ 1/2 ಕೆಜಿ
ಈರುಳ್ಳಿ 2
ಟೊಮೆಟೊ 3
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1ಚಮಚ
ಜೀರಿಗೆ ಪುಡಿ 1ಚಮಚ
ಅರಿಶಿನ ಸ್ವಲ್ಪ
ಧನಿಯ ಪುಡಿ 1/2 ಚಮಚ
ಒಣಮೆಣಸಿನ ಪುಡಿ 2 ಚಮಚ
ಕಸೂರಿ ಮೇಥಿ 1ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 2ಚಮಚ
ಮಾಡುವ ವಿಧಾನ:
ಬೆಂಡೆಕಾಯಿ ಯನ್ನು ತೊಳೆದು ಒಣಗಿಸಿ ಹೆಚ್ಚಿಟ್ಟುಕೊಳ್ಳಿ.
ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬೆಂಡೆಕಾಯಿ ಯನ್ನು ಹುರಿದಿಡಿ.
ಈರುಳ್ಳಿ ಮತ್ತು ಟೊಮೆಟೊ ಅನ್ನು ಬೇರೆ ಬೇರೆಯಾಗಿ ಪೇಸ್ಟ್ ಮಾಡಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ನಂತರ ಟೊಮೆಟೊ ಪೇಸ್ಟ್ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ. ಈಗ ಅರಿಶಿನ, ಉಪ್ಪು, ಧನಿಯ ಪುಡಿ, ಜೀರಿಗೆ ಪುಡಿ, ಒಣಮೆಣಸಿನಕಾಯಿ ಪುಡಿ, ಕಸೂರಿ ಮೇಥಿ ಹಾಕಿ ಬಾಡಿಸಿ. ಸ್ವಲ್ಪ ನೀರು ಸೇರಿಸಿ ಕುದಿಸಿ ಕೊನೆಯದಾಗಿ ಹುರಿದ ಬೆಂಡೆಕಾಯಿ ಸೇರಿಸಿ ಮಿಕ್ಸ್ ಮಾಡಿ 5ನಿಮಿಷ ಮುಚ್ಚಿ ಕಡಿಮೆ ಉರಿಯಲ್ಲಿ ಕುದಿಸಿದರೆ ರುಚಿಯಾದ ಬೆಂಡೆಕಾಯಿ ಕರ್ರಿ ರೆಡಿ.
ಇದು ದೋಸೆ, ಚಪಾತಿ, ರೊಟ್ಟಿಗೆ ಜೊತೆಯಾಗುತ್ತೆ.