ಅವಲಕ್ಕಿ / ಪೋಹ | Avalakki / Poha recipe in Kannada

ಅವಲಕ್ಕಿ / ಪೋಹ

ಬೇಕಾಗುವ ಸಾಮಗ್ರಿಗಳು:
ಗಟ್ಟಿ ಅವಲಕ್ಕಿ 1ಕಪ್
ಹಸಿಮೆಣಸಿನಕಾಯಿ 5
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ತೆಂಗಿನ ತುರಿ 2ಚಮಚ
ಎಣ್ಣೆ 1ಚಮಚ
ಸಾಸಿವೆ 1/2 ಚಮಚ
ಕಡ್ಲೆಕಾಯಿ 2ಚಮಚ
ಕಡ್ಲೆಬೇಳೆ 1ಚಮಚ
ಉದ್ದಿನಬೇಳೆ 1ಚಮಚ
ನಿಂಬೆ ರಸ 1/2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಅರಿಶಿನ ಸ್ವಲ್ಪ

ಮಾಡುವ ವಿಧಾನ:
ಅವಲಕ್ಕಿ ಯನ್ನು ತೊಳೆದು ಅವಲಕ್ಕಿ ಮುಳುಗುವಷ್ಟು ನೀರು ಸೇರಿಸಿ ನೆನೆಯಲು ಇಡಿ.

ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಕಡ್ಲೆಬೇಳೆ, ಉದ್ದಿನಬೇಳೆ, ಕಡ್ಲೆಕಾಯಿ ಹಾಕಿ ಕೆಂಪಗೆ ಹುರಿಯಿರಿ. ನಂತರ ಕರಿಬೇವು ಹಸಿಮೆಣಸಿನಕಾಯಿ ಅರಿಶಿನ ಸೇರಿಸಿ ಬಾಡಿಸಿ ಅವಲಕ್ಕಿ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಐದು ನಿಮಿಷ ಮುಚ್ಚಿಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಮತ್ತು ನಿಂಬೆ ರಸ ಹಾಕಿ ಕೈಯಾಡಿಸಿ ಬಿಸಿ ಬಿಸಿಯಾಗಿ ಬಡಿಸಿ.

ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಟೊಮೆಟೊ ಹಾಕಿ ಬಡಿಸಿದರೆ ಪೋಹ ರೆಡಿ.

ಅವಲಕ್ಕಿ / ಪೋಹ | Avalakki / Poha

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asia