ಆಲೂ ಬಟಾಣಿ ಸಾಗು
ಬೇಕಾಗುವ ಸಾಮಗ್ರಿಗಳು:
ಆಲೂಗೆಡ್ಡೆ 4
ಟೊಮೆಟೊ 2
ಈರುಳ್ಳಿ 2
ಹಸಿ ಬಟಾಣಿ 1ಕಪ್
ಹಸಿಮೆಣಸಿನಕಾಯಿ 6
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಅರಿಶಿನ ಸ್ವಲ್ಪ
ಎಣ್ಣೆ 2ಚಮಚ
ಸಾಸಿವೆ 1/2 ಚಮಚ
ಕಡ್ಲೆಬೇಳೆ 1ಚಮಚ
ಉದ್ದಿನಬೇಳೆ 1ಚಮಚ
ಶುಂಠಿ ತುರಿ 1/2ಚಮಚ
ಕಡ್ಲೆಹಿಟ್ಟು 2ಚಮಚ
ನೀರು 1ಕಪ್
ಇಡ್ಲಿ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಮಾಡುವ ವಿಧಾನ:
ಆಲೂಗೆಡ್ಡೆ ಯನ್ನು ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಕೊಳ್ಳಿ. ಈರುಳ್ಳಿ ಟೊಮೆಟೊ ಹಸಿಮೆಣಸಿನಕಾಯಿಯನ್ನು ಹೆಚ್ಚಿಕೊಳ್ಳಿ. ಕಡ್ಲೆಹಿಟ್ಟನ್ನು ನೀರಿನಲ್ಲಿ ಕಲಸಿ ಡಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಕಡ್ಲೆಬೇಳೆ ಉದ್ದಿನಬೇಳೆ ಹಾಕಿ ಕೆಂಪಗೆ ಹುರಿಯಿರಿ. ನಂತರ ಈರುಳ್ಳಿ ಕರಿಬೇವು ಹಸಿಮೆಣಸಿನಕಾಯಿ ಮತ್ತು ಬಟಾಣಿ ಹಾಕಿ ಮೆತ್ತಾಗಾಗುವರೆಗೂ ಹುರಿಯಿರಿ. ಈಗ ಟೊಮೆಟೊ ಶುಂಠಿ ತುರಿ ಸ್ವಲ್ಪ ಉಪ್ಪು ಅರಿಶಿನ ಸೇರಿಸಿ ಬೇಯಲು ಬಿಡಿ. ಟೊಮೆಟೊ ಮೆತ್ತಾಗಾದ ಮೇಲೆ ನೀರಿನಲ್ಲಿ ಕಲಸಿಟ್ಟ ಕಡ್ಲೆಹಿಟ್ಟು ಒಂದು ಕಪ್ ನೀರು ಸೇರಿಸಿ ಹಸಿವಾಸನೆ ಹೋಗುವರೆಗೂ ಕುದಿಸಿ. ಕೊನೆಯದಾಗಿ ಆಲೂಗಡ್ಡೆ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಕೈಯಾಡಿಸಿ ಸಣ್ಣ ಉರಿಯಲ್ಲಿ ಎರಡು ನಿಮಿಷ ಬೇಯಿಸಿದರೆ ರುಚಿಯಾದ ಆಲೂ ಬಟಾಣಿ ಸಾಗು ರೆಡಿ.
ಗಟ್ಟಿ ಎನಿಸಿದರೆ ಸ್ವಲ್ಪ ನೀರು ಸೇರಿಸಿ ಕುದಿಸಿ.
ಇದು ಪೂರಿ, ಇಡ್ಲಿ, ದೋಸೆ, ಚಪಾತಿ ಯಾವುದಕಾದರೂ ಸರಿ ಜೊತೆಯಾಗುತ್ತೆ.