ಟೊಮೆಟೊ ಬಾತ್
ಬೇಕಾಗುವ ಸಾಮಗ್ರಿಗಳು:
ಟೊಮೆಟೊ 6
ಈರುಳ್ಳಿ 2
ಹಸಿಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ತೆಂಗಿನ ತುರಿ 2ಚಮಚ
ಅಕ್ಕಿ 1ಕಪ್
ಒಣ ಮೆಣಸಿನಕಾಯಿ ಪುಡಿ 2ಚಮಚ
ನೀರು 2ಕಪ್
ಉಪ್ಪು ರುಚಿಗೆ ತಕ್ಕಷ್ಟು
ಚಕ್ಕೆ 1″
ಲವಂಗ 2
ಅರಿಶಿನ ಸ್ವಲ್ಪ
ಹಸಿಬಟಾಣಿ 1/2 ಕಪ್
ತುಪ್ಪ 2ಚಮಚ
ಶುಂಠಿ 1″
ಬೆಳ್ಳುಳ್ಳಿ 10 ಎಸಳು
ಮಾಡುವ ವಿಧಾನ:
ಈರುಳ್ಳಿ 2,ಟೊಮೆಟೊ 2, ಹಸಿಮೆಣಸಿನಕಾಯಿ 2 ಉದ್ದುದ್ದ ಹೆಚ್ಚಿಕೊಳ್ಳಿ. 4 ಟೊಮೆಟೊ ನುಣ್ಣಗೆ ರುಬ್ಬಿಕೊಳ್ಳಿ. ತೆಂಗಿನ ತುರಿ, ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ ನುಣ್ಣಗೆ ರುಬ್ಬಿಕೊಳ್ಳಿ.
ಕುಕ್ಕರ್ ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಟೊಮೆಟೊ, ಬಟಾಣಿ ಮತ್ತು ಹಸಿಮೆಣಸಿನಕಾಯಿ ಹಾಕಿ ಮೆತ್ತಾಗಾಗುವರೆಗೂ ಹುರಿಯಿರಿ. ನಂತರ ರುಬ್ಬಿದ ಟೊಮೆಟೊ, ತೆಂಗಿನ ಮಿಶ್ರಣ ಸೇರಿಸಿ ಹಸಿವಾಸನೆ ಹೋಗುವರೆಗೂ ಹುರಿಯಿರಿ. ಅರಿಶಿನ ಮತ್ತು ಒಣಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ ನೀರು ಸೇರಿಸಿ ಕುದಿಯಲು ಬಿಡಿ. ನೀರು ಕುದಿ ಬಂದಮೇಲೆ ಅಕ್ಕಿ, ಉಪ್ಪು ಕೈಯಾಡಿಸಿ ಒಂದು ಸಲ ಕೂಗಿಸಿ. ಕುಕ್ಕರ್ ತಣ್ಣಾಗಾದ ಮೇಲೆ ತೆಗೆದು ಕೊತ್ತಂಬರಿ ಸೊಪ್ಪು, ತುಪ್ಪ ಹಾಕಿ ಮಿಕ್ಸ್ ಮಾಡಿ ಬಡಿಸಿ.