ಬಟಾಣಿ ಬಾತ್ | Green Peas Bath recipe in Kannada

By

ಬಟಾಣಿ ಬಾತ್

ಬೇಕಾಗುವ ಸಾಮಗ್ರಿಗಳು:
ಹಸಿ ಬಟಾಣಿ 1ಕಪ್
ಅಕ್ಕಿ 1ಕಪ್
ನೀರು 2ಕಪ್
ಹಸಿಮೆಣಸಿನಕಾಯಿ 7-8
ಶುಂಠಿ 1″
ಬೆಳ್ಳುಳ್ಳಿ 15 ಎಸಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಈರುಳ್ಳಿ 1
ನಿಂಬೆ ರಸ 1ಚಮಚ
ಎಣ್ಣೆ 1ಚಮಚ
ತುಪ್ಪ 1ಚಮಚ
ಚಕ್ಕೆ 2″
ಲವಂಗ 4
ಏಲಕ್ಕಿ 2
ಬಿರಿಯಾನಿ ಎಲೆ 1
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಶುಂಠಿ ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಪೇಸ್ಟ್ ಮಾಡಿಕೊಳ್ಳಿ.

ಕುಕ್ಕರ್ ಗೆ ಎಣ್ಣೆ ಮತ್ತು ತುಪ್ಪ ಹಾಕಿ ಬಿಸಿಯಾದ ಮೇಲೆ ಚಕ್ಕೆ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ ಹಾಕಿ ಫ್ರೈ ಮಾಡಿ ನಂತರ ಈರುಳ್ಳಿ ಹಾಕಿ ಮೆತ್ತಾಗಾಗುವರೆಗೂ ಹುರಿಯಿರಿ ನಂತರ ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಪೇಸ್ಟ್ ಬಟಾಣಿ ಸೇರಿಸಿ ಹಸಿವಾಸನೆ ಹೋಗುವರೆಗೂ ಹುರಿದು ನೀರು ಹಾಕಿ ಕುದಿಯಲು ಬಿಡಿ.
ನೀರು ಕುದಿ ಬಂದಮೇಲೆ ಅಕ್ಕಿ, ಉಪ್ಪು ಮತ್ತು ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿ ಮುಚ್ಚಲ ಮುಚ್ಚಿ ಒಂದು ಕೂಗಿಸಿ. ಕುಕ್ಕರ್ ತಣ್ಣಾಗಾದ ಮೇಲೆ ಕೊತ್ತಂಬರಿ ಸೊಪ್ಪು ಸೇರಿಸಿ ಬಡಿಸಿ.

ಬಟಾಣಿ ಬಾತ್ | Green Peas Bath

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz