ನುಚ್ಚಕ್ಕಿ ಉಪ್ಪಿಟ್ಟು
ಬೇಕಾಗುವ ಸಾಮಗ್ರಿಗಳು:
ನುಚ್ಚಕ್ಕಿ 1ಕಪ್
ನೀರು 2ಕಪ್
ಹಸಿಬಟಾಣಿ 1/2 ಕಪ್
ಕ್ಯಾರೆಟ್ 1
ಈರುಳ್ಳಿ 1
ಟೊಮೆಟೊ 1
ಹುರುಳಿಕಾಯಿ 10
ಆಲೂಗಡ್ಡೆ 1
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ತೆಂಗಿನ ತುರಿ 2ಚಮಚ
ಬದನೇಕಾಯಿ 1
ಹಸಿಮೆಣಸಿನಕಾಯಿ 8
ಎಣ್ಣೆ 2ಚಮಚ
ಸಾಸಿವೆ 1/2 ಚಮಚ
ಚಕ್ಕೆ ಲವಂಗ ಪುಡಿ 1/2 ಚಮಚ
ಧನಿಯ ಪುಡಿ 1ಚಮಚ
ತುಪ್ಪ 2ಚಮಚ
ಮಾಡುವ ವಿಧಾನ:
ತರಕಾರಿಗಳನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
ನೀರನ್ನು ಕಾಯಲು ಇಡಿ.
ನುಚ್ಚಕ್ಕಿಯನ್ನು ಹುರಿದು ತೊಳೆದು ಇಟ್ಟುಕೊಳ್ಳಿ.
ಕುಕ್ಕರ್ ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ನಂತರ ಹಸಿಮೆಣಸಿನಕಾಯಿ ಈರುಳ್ಳಿ ಕರಿಬೇವು ಬಟಾಣಿ ಮತ್ತು ತರಕಾರಿಗಳನ್ನು ಹಾಕಿ ಫ್ರೈ ಮಾಡಿ. ಇದಕ್ಕೆ ಚಕ್ಕೆ ಲವಂಗ ಪುಡಿ, ದನಿಯಾ ಪುಡಿ ಸೇರಿಸಿ ಮಿಕ್ಸ್ ಮಾಡಿ. ಈಗ ಬಿಸಿಯಾದ ನೀರು ಸೇರಿಸಿ ಕುದಿಯಲು ಬಿಡಿ. ಕುದಿ ಬಂದಮೇಲೆ ನುಚ್ಚಕ್ಕಿ ಮತ್ತು ಉಪ್ಪು ಸೇರಿಸಿ ಮುಚ್ಚಲ ಮುಚ್ಚಿ ಒಂದು ವಿಷಲ್ ಕೂಗಿಸಿ. ಕುಕ್ಕರ್ ತಣ್ಣಾಗಾದ ಮೇಲೆ ತೆಗೆದು ಕೊತ್ತಂಬರಿ ಸೊಪ್ಪು ತುಪ್ಪ ಮತ್ತು ತೆಂಗಿನ ತುರಿ ಸೇರಿಸಿ ಮಿಕ್ಸ್ ಮಾಡಿದರೆ ಬಿಸಿಯಾದ ರುಚಿಯಾದ ನುಚ್ಚಕ್ಕಿ ಉಪ್ಪಿಟ್ಟು ತಿನ್ನಲು ರೆಡಿ.